ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ನಲ್ಲೇ ತುಂಬ ಬೇಕಂತೆ ಸೇವಾಸಿಂಧು ಅರ್ಜಿ

ಚಾಲಕರಿಗೆ ₹5 ಸಾವಿರ ನೆರವು:
Last Updated 23 ಮೇ 2020, 18:27 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆಟೊ ಮತ್ತು ಟ್ಯಾಕ್ಸಿ ಚಾಲಕರು ಸರ್ಕಾರದಿಂದ ₹5 ಸಾವಿರ ನೆರವು ಪಡೆಯುವ ಅರ್ಜಿ ನಮೂನೆಯನ್ನು ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಈ ಸವಲತ್ತು ಪಡೆಯಲು ಚಾಲಕರು ಇಂಗ್ಲಿಷ್‌ನಲ್ಲೇ ಅರ್ಜಿ ತುಂಬ ಬೇಕಂತೆ!

ಚಾಲಕರು ತಮ್ಮ ಆಧಾರ್ ಸಂಖ್ಯೆ, ವಿಳಾಸ, ಚಾಲನಾ ಪರವಾನಗಿ (ಡಿಎಲ್‌) ಸಂಖ್ಯೆ, ಬ್ಯಾಡ್ಜ್ ಸಂಖ್ಯೆ, ವಾಹನದ ಚಾಸ್ಸಿ ಸಂಖ್ಯೆ, ದೃಢತೆ (ಫಿಟ್‌ನೆಸ್‌) ಪ್ರಮಾಣಪತ್ರ, ಚಾಲಕರ ವರ್ಗ, ವಾಹನದ ವರ್ಗ, ಬ್ಯಾಂಕ್ ಖಾತೆ ಸಂಖ್ಯೆ ಮತ್ತಿತರ ವಿವರಗಳನ್ನು ಇಂಗ್ಲಿಷ್ ನಲ್ಲಿಯೇ ಭರ್ತಿ ಮಾಡಬೇಕು. ಚಾಲನಾ ಪರವಾನಗಿಯಲ್ಲಿರುವಂತೆಯೇ ಚಾಲಕರು ತಮ್ಮ ಹೆಸರನ್ನು ಅರ್ಜಿಯಲ್ಲಿ ನಮೂದಿಸಬೇಕು. ಎಲ್ಲ ವಿವರ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಅರ್ಹರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಹೇಳಿದೆ.

ಹೆಚ್ಚಿನ ಮಾಹಿತಿಗೆ 080-22236698 ಅಥವಾ 94498–63214 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಅರ್ಜಿಗಾಗಿ https://serviceonline.gov.in/karnataka/directApply.do?serviceId=1088 ಈ ಲಿಂಕ್ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT