ಅಖಿಲ ಭಾರತ ವೀರಶೈವ ಮಹಾಸಭಾ: ಶಾಮನೂರು ಪುನರಾಯ್ಕೆ

ಶನಿವಾರ, ಮಾರ್ಚ್ 23, 2019
24 °C

ಅಖಿಲ ಭಾರತ ವೀರಶೈವ ಮಹಾಸಭಾ: ಶಾಮನೂರು ಪುನರಾಯ್ಕೆ

Published:
Updated:
Prajavani

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವಿರೋಧವಾಗಿ ಪುನರಾಯ್ಕೆ ಆಗಿದ್ದಾರೆ.

ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎನ್‌.ತಿಪ್ಪಣ್ಣ ಚುನಾಯಿತರಾಗಿದ್ದಾರೆ. ರಾಜ್ಯದ 90 ತಾಲ್ಲೂಕು ಘಟಕಗಳು, 5 ಜಿಲ್ಲಾ ಘಟಕಗಳು, 2 ಮಹಾನಗರ ಪಾಲಿಕೆ ಘಟಕಗಳು, ರಾಜ್ಯ ಘಟಕ ಹಾಗೂ ರಾಷ್ಟ್ರೀಯ ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು.

ಕೇರಳದಲ್ಲಿನ 11 ತಾಲ್ಲೂಕು ಘಟಕಗಳು ಹಾಗೂ 2 ಜಿಲ್ಲಾ ಘಟಕಗಳ ಪದಾಧಿಕಾರಿಗಳ ಆಯ್ಕೆಯೂ ಈ ಚುನಾವಣೆ ಒಳಗೊಂಡಿತ್ತು.

**
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೀರಶೈವ–ಲಿಂಗಾಯತ ಭವನ ಮತ್ತು ಬೆಂಗಳೂರಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿ ನಿಲಯ ಪ್ರಾರಂಭಿಸಲು ಪ್ರಯತ್ನಿಸುತ್ತೇನೆ.
-ಶಾಮನೂರು ಶಿವಶಂಕರಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !