ಮಂಗಳವಾರ, ಮೇ 18, 2021
28 °C

ಅಂಬರೀಷ್‌ ಟೀಕಿಸಿದ ಶಿವರಾಮೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಅವರನ್ನು ಓಲೈಸುವ ಭರದಲ್ಲಿ ಲೋಕಸಭೆ ಉಪಚುನಾವಣೆ ಜೆಡಿಎಸ್‌ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡ ಅವರು ಅಂಬರೀಷ್‌ ಅವರನ್ನು ಟೀಕಿಸಿದ್ದಾರೆ.

ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌– ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ಅವರನ್ನು ಸೋಲಿಸುವುದಕ್ಕಾಗಿಯೇ 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ನನಗೆ 1.50 ಲಕ್ಷ ಮತಗಳು ಬಂದವು. ಅವುಗಳಲ್ಲಿ ಬಹುತೇಕ ಮತ ಕಾಂಗ್ರೆಸ್‌ನಿಂದ ಬಂದಿದ್ದವು. ಇದರಿಂದ ಅವರು ಸೋತು, ಚಲುವರಾಯಸ್ವಾಮಿ ಗೆದ್ದರು’ ಎಂದು ಅಂಬರೀಷ್‌ ಹೆಸರು ಹೇಳದೆ ಟೀಕಿಸಿದರು.

ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿದ್ದ ಶಿವರಾಮೇಗೌಡರು ‘ರಮ್ಯಾ ಅವರನ್ನು ಸೋಲಿಸಿದ್ದೇ ನಾನು’ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಹಾರಕ್ಕೆ ಕೊರಳೊಡ್ಡದ ಚಲುವರಾಯಸ್ವಾಮಿ: ಮುಖಂಡರಿಗೆ ಹಾಕಲು ಬೃಹತ್‌ ಹಾರ ತರಲಾಗಿತ್ತು. ಎಲ್ಲರನ್ನೂ ಸೇರಿಸಿ ಹಾರ ಹಾಕುವಾಗ ಚಲುವರಾಯಸ್ವಾಮಿ ಕೊರಳು ಒಡ್ಡಲಿಲ್ಲ. ಕಾರ್ಯಕರ್ತರಿಗೆ ಸಂಜ್ಞೆ ಮಾಡಿ ಬೇರೆಯವರಿಗೆ ಹಾಕುವಂತೆ ಕೈ ತೋರಿದರು. ಇದರಿಂದ, ಶಿವರಾಮೇಗೌಡ ಜತೆಗಿನ ಭಿನ್ನಾಭಿಪ್ರಾಯ ಕಡಿಮೆಯಾಗಿಲ್ಲ ಎಂಬುದು ಸ್ಪಷ್ಟವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು