ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರೆದುಕೊಂಡು ಬಂದವರನ್ನು ಬಿಟ್ಟು ಹೋಗ್ತೀರಾ’ ಎಂದು ಶೋಭಾ ಹೇಳಿದ್ದು ಯಾರಿಗಾಗಿ?

Last Updated 15 ಮಾರ್ಚ್ 2020, 15:32 IST
ಅಕ್ಷರ ಗಾತ್ರ

ಬೆಂಗಳೂರು:‘ಜೊತೆಯಲ್ಲಿ ಕರೆದುಕೊಂಡು ಬಂದು ಈಗ ಬಿಟ್ಟು ಹೋಗುತ್ತೀರಾ?’ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಳಿದ ಪ್ರಶ್ನೆ ಯಾರನ್ನು ಕುರಿತಾದದ್ದು ಎಂಬುದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

‘ಕರೆದುಕೊಂಡು ಬಂದವರನ್ನು ಹೋಗುವಾಗ ಬಿಟ್ಟು ಹೋಗ್ತೀರಾ’ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರನ್ನು ಉದ್ದೇಶಿಸಿ ಶೋಭಾ ಕರಂದ್ಲಾಜೆ ಹೇಳಿದ್ದೇ ಹೊರತು ಶೋಭಾ ಅವರು ತಮ್ಮನ್ನು ಬಿಟ್ಟು ಹೋಗುತ್ತೀರಾ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಲ್ಲ’ ಎಂದು ಬೊಮ್ಮಾಯಿ ಹೇಳಿದ್ದಾರೆ.

‘ಯಡಿಯೂರಪ್ಪ ಜತೆ ಬೆಳಗಾವಿಗೆ ಬಂದಿದ್ದ ರವಿಕುಮಾರ್ ವಾಪಸ್ ಬೆಂಗಳೂರಿಗೆ ಬರಲು ಬೇರೊಂದು ವಿಮಾನದಲ್ಲಿ ಟಿಕೆಟ್ ಮಾಡಿಸಿದ್ದರು. ತಾವು ಹುಬ್ಬಳ್ಳಿಗೆ ಬರದೇ ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದರು. ಹುಬ್ಬಳ್ಳಿಗೆ ಹೊರಟಿದ್ದ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಮಾತನಾಡಿದ ಶೋಭಾ, ರವಿಕುಮಾರ್ ಅವರನ್ನು ಬಿಟ್ಟು ಹೋಗುತ್ತೀದ್ದರಲ್ಲ ಎಂಬರ್ಥದಲ್ಲಿ ಪ್ರಶ್ನಿಸಿದರು. ಹಿಂದೆ ನಡೆದ ಸಂಗತಿಗಳು ಗೊತ್ತಿಲ್ಲದೇ ಕೊನೆಯ ಮಾತನ್ನಷ್ಟೇ ಕೇಳಿಸಿಕೊಂಡಿದ್ದರಿಂದಾಗಿ ಮಾಹಿತಿಗಳು ತಪ್ಪಾಗಿ ಬಿಂಬಿತವಾಗಿವೆ’ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT