ಯಡಿಯೂರಪ್ಪ–ಶೋಭಾ ಮದುವೆ ಕಥೆಯೂ ಡೈರಿಯಲ್ಲಿದೆ: ಕ್ಯಾರವಾನ್

ಶುಕ್ರವಾರ, ಏಪ್ರಿಲ್ 26, 2019
28 °C

ಯಡಿಯೂರಪ್ಪ–ಶೋಭಾ ಮದುವೆ ಕಥೆಯೂ ಡೈರಿಯಲ್ಲಿದೆ: ಕ್ಯಾರವಾನ್

Published:
Updated:

ಬೆಂಗಳೂರು: ‘ನನ್ನ ಹೆಂಡತಿ ಮೈತ್ರಾದೇವಿ ನಿಧನದ ನಂತರ ಒಂಟಿತನ ತೀವ್ರವಾಗಿ ಬಾಧಿಸುತ್ತಿತ್ತು. ಅದಕ್ಕಾಗಿಯೇ ಶೋಭಾ ಕರಂದ್ಲಾಜೆಯನ್ನು ಕೇರಳದ ಚೊಟ್ಟನಿಕ್ಕರಾದಲ್ಲಿರುವ ಭಗವತಿ ದೇಗುಲದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದೆ. ಯಡಿಯೂರು ಸಿದ್ದಲಿಂಗನ ಹೆಸರಿನಲ್ಲಿ ಆಕೆಯನ್ನು ನನ್ನ ಕಾಯಾ, ವಾಚಾ, ಮನಸಾ ಪತ್ನಿ ಎಂದು ಒಪ್ಪಿಕೊಂಡೆ’.

-ಯಡಿಯೂರಪ್ಪ ಅವರು ಬರೆದಿದ್ದಾರೆ ಎನ್ನಲಾದ ಡೈರಿಯಲ್ಲಿ ಈ ಮಾಹಿತಿಯೂ ಇದೆ ಎಂದು ‘ದಿ ಕ್ಯಾರವಾನ್’ ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿದಾಗ, ‘ಯಾರೋ ಹುಚ್ಚರು ಆ ಡೈರಿ ಬರೆದಿರಬೇಕು ಎಂದು ಶೋಭಾ ಫೋನ್ ಕುಕ್ಕಿದರು. ಮತ್ತೆಮತ್ತೆ ಫೋನ್ ಮಾಡಿದರೂ ಶೋಭಾ ನಮ್ಮ ಕರೆ ಸ್ವೀಕರಿಸಲಿಲ್ಲ’ ಎಂದು ಕ್ಯಾರಾವಾನ್ ವರದಿಗಾರರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘2016ರಲ್ಲಿ ಯಡಿಯೂರಪ್ಪ–ಶೋಭಾ ಮದುವೆಯಾಗಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಯಡಿಯೂರಪ್ಪ ಅಥವಾ ಶೋಭಾ ಈ ವರದಿಗಳನ್ನು ನಿರಾಕರಿಸಿರಲಿಲ್ಲ. ಆದರೆ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಈ ವಿಷಯವನ್ನು ತಿಳಿಸಲು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿತ್ತು’ ಎಂದು ಕ್ಯಾರಾವಾನ್ ವರದಿ ಹೇಳಿದೆ.

ಇದನ್ನೂ ಓದಿ

ಬಿಜೆಪಿ ನಾಯಕರಿಗೆ ಸಾವಿರಾರು ಕೋಟಿ ಲಂಚ ಕೊಟ್ಟ ಯಡಿಯೂರಪ್ಪ- ಕ್ಯಾರವಾನ್

ಯಡಿಯೂರಪ್ಪ ಡೈರಿ 2 ವರ್ಷದಿಂದ ಕೈಲಿದ್ರೂ ಡಿಕೆಶಿ ಏನೂ ಮಾಡಲಿಲ್ಲ

(ಇನ್ನಷ್ಟು ಮಾಹಿತಿ ಶೀಘ್ರ ಪ್ರಕಟವಾಗಲಿದೆ)

ಬರಹ ಇಷ್ಟವಾಯಿತೆ?

 • 74

  Happy
 • 15

  Amused
 • 4

  Sad
 • 5

  Frustrated
 • 23

  Angry

Comments:

0 comments

Write the first review for this !