ಮಂಗಳವಾರ, ಮೇ 18, 2021
22 °C

'ಸಿದ್ದರಾಮಯ್ಯ ರಾವಣಾಸುರ'; ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಂಸ್ಕಾರ ಇಲ್ಲದ ವ್ಯಕ್ತಿ. ರವಣಾಸುರನಲ್ಲಿ ಇರುವ ಎಲ್ಲ ಗುಣಗಳೂ ಅವರಲ್ಲಿವೆ ಎಂದು ಶಾಸಕ ಶ್ರೀರಾಮುಲು ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಮಹಿಳೆಯರ ಮೇಲೆ ಗೌರವ ಇಲ್ಲ. ಪ್ರಾಮಾಣಿಕ ನಡವಳಿಕೆ ಕೂಡ ಅವರಲ್ಲಿ ಇಲ್ಲ ಎಂಬುದು ಹತ್ತಿರದಿಂದ ನೋಡಿದ ಎಲ್ಲರಿಗೂ ಗೊತ್ತು. ಅವರ ನಡವಳಿಕೆ ಯಾರಿಗೂ ಇಷ್ಟವಾಗಲ್ಲ ಎಂದು ಕಿಡಿ ಕಾರಿದರು.

ಸಮ್ಮಿಶ್ರ ಸರ್ಕಾರದ ಕೊನೆ ದಿನಗಳನ್ನು ನಾವು ನೋಡುತ್ತಿದ್ದೇವೆ. ಸರ್ಕಾರ ಅಳಿವಿನಂಚಿನಲ್ಲಿದ್ದು, ಕುಮಾರಸ್ವಾಮಿ ಎಲ್ಲರಿಗೂ ಮುಖ್ಯಮಂತ್ರಿ ಆಗಿಲ್ಲ. ಕಾಂಗ್ರೆಸ್‌ಗೆ ಈವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ಲಂಚ ಹಾಗೂ ಕಮಿಷನ್ ಹಣಕ್ಕೆ ಎರಡೂ ಪಕ್ಷಗಳು ಕಚ್ಚಾಡುತ್ತಿವೆ ಎಂದು ಆರೋಪಿಸಿದರು.

ಕಂಪ್ಲಿ ಶಾಸಕ ಗಣೇಶ್ ಹಾಗೂ ವಿಜಯನಗರ ಶಾಸಕ ಆನಂದ್ ಸಿಂಗ್ ನಡುವಿನ ಗಲಾಟೆಯಲ್ಲಿ ಬಿಜೆಪಿ ಲಾಭ ಪಡೆದುಕೊಳ್ಳುತ್ತಿಲ್ಲ. ಅವರು ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ. ಬಿಜೆಪಿ ಯಾರನ್ನು ರಕ್ಷಿಸುತ್ತಿಲ್ಲ, ಯಾವ ಶಾಸಕರನ್ನು ಸೆಳೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು