ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲಾಧರಿತ ಶಿಕ್ಷಣ ಇಂದಿನ ಅಗತ್ಯ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

Last Updated 2 ಫೆಬ್ರುವರಿ 2020, 10:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೌಶಲಾಧರಿತ ಶಿಕ್ಷಣ ಇಂದಿನ ಅಗತ್ಯವಾಗಿದೆ. ಎಷ್ಟೇ ಪದವಿ ಪಡೆದಿದ್ದರೂ, ಕೌಶಲವಿಲ್ಲದಿದ್ದರೆ ಇಂದು ಉದ್ಯೋಗ ಸಿಗುವುದು ಕಷ್ಟ. ಹಾಗಾಗಿ, ಶಿಕ್ಷಣದ ಜತೆಗೆ ಕೌಶಲ ತರಬೇತಿಯನ್ನು ನೀಡಬೇಕಿದೆ’ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

ದೇಶಪಾಂಡೆ ಫೌಂಡೇಷನ್‌ನ ನೂತನ ಕೌಶಲ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತ ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿದೆ. ಜನಸಂಖ್ಯೆಯ ಶೇ 60ರಷ್ಟು ಮಂದಿ 30 ವರ್ಷದೊಳಗಿನವರಿದ್ದಾರೆ. ಈ ಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳಬೇಕಿದೆ. ಹಾಗಾಗಿ, ಸ್ಕೂಲಿಂಗ್ ಜತೆಗೆ ಸ್ಕಿಲ್ಲಿಂಗ್ ಆರಂಭವಾದರೆ, ನಿರುದ್ಯೋಗ ತನ್ನಿಂತಾನೆ ಕಮ್ಮಿಯಾಗುತ್ತದೆ’ ಎಂದರು.

‘ಕೈಗಾರಿಕೆಗಳು ವಿಶ್ವವಿದ್ಯಾಲಯಗಳೊಂದಿಗೆ ಕೈ ಜೋಡಿಸಬೇಕು. ಅಲ್ಲಿ ಸಂಶೋಧನಾ ಕೇಂದ್ರಗಳನ್ನು ತೆರೆದು, ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ನೀಡುವ ಮೂಲಕ, ಹೊಸ ಜಗತ್ತಿಗೆ ಅಣಿಗೊಳಿಸಬೇಕು. ಇಂಗ್ಲಿಷ್ ಕಲಿಕೆ ತಪ್ಪಲ್ಲ. ಆದರೆ, ಇಂಗ್ಲಿಷ್ ವ್ಯಕ್ತಿಗಳಾಗಬಾರದು. ವ್ಯವಹಾರ ಜ್ಞಾನಕ್ಕಷ್ಟೇ ಬೇರೆ ಭಾಷೆಗಳನ್ನು ಕಲಿಯಿರಿ. ಆದರೆ, ಮಾತೃಭಾಷೆ ಹಾಗೂ ತಾಯ್ನೆಲವನ್ನು ಮರೆಯಬೇಡಿ’ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT