ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೆಕ್ಕಿಂಗ್‌ನಲ್ಲಿ ಅವಘಡ: ವಿದೇಶಿ ಯುವತಿಯ ಕಾಲು ಮುರಿತ

ಪ್ರವೇಶ ನಿಷೇಧಿತ ‘ಪ್ಯಾರಡೈಸ್ ಬೀಚ್‌’ನಲ್ಲಿ ಬಂಡೆಗಳ ಮೇಲಿನಿಂದ ಬಿದ್ದ ಯುವತಿ
Last Updated 26 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಗೋಕರ್ಣ:ಸಮೀಪದ ಪ್ಯಾರಡೈಸ್ ಕಡಲತೀರದಲ್ಲಿ ಬುಧವಾರ ಟ್ರೆಕ್ಕಿಂಗ್ ತೆರಳಿದ್ದ ಸ್ಪೇನ್ ದೇಶದ ಯುವತಿಯೊಬ್ಬರು ಬಂಡೆಯ ಮೇಲಿನಿಂದಬಿದ್ದರು. ಅವಘಡದಲ್ಲಿ ಅವರಎರಡೂ ಕಾಲುಗಳ ಎಲುಬುಗಳು ಮುರಿದಿವೆ.

ಮಾರ್ಟಾ ಮಾರ್ಟಿನ್ ಇಸ್ಲಾಸ್ (24) ಗಾಯಗೊಂಡವರು. ಅವರಿಗೆಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನಆಸ್ಪತ್ರೆಗೆ ಕಳುಹಿಸಲಾಗಿದೆ. ಮನೋವಿಜ್ಞಾನದ ವಿದ್ಯಾರ್ಥಿನಿಯಾಗಿರುವ ಅವರು, ಒಬ್ಬರೇಗೋಕರ್ಣಕ್ಕೆ ಪ್ರವಾಸ ಬಂದಿದ್ದರು. ಟ್ರೆಂಕಿಂಗ್‌ನಲ್ಲಿ ಭಾಗವಹಿಸಿ,ಎರಡು ದಿನಗಳಲ್ಲಿ ಮುಂಬೈನಿಂದ ಸ್ವದೇಶಕ್ಕೆ ಹೋಗುವವರಾಗಿದ್ದರು. ಈ ಟ್ರೆಕ್ಕಿಂಗ್‌ ಅನ್ನು ಸ್ಥಳೀಯರೊಬ್ಬರು ಸಂಘಟಿಸಿದ್ದರು ಎನ್ನಲಾಗಿದೆ.

ಅವಘಡ ನಡೆದ ಜಾಗಕ್ಕೆಆಂಬುಲೆನ್ಸ್ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಅವರನ್ನು ದೋಣಿಯಲ್ಲಿ ಬೇಲೆಕಾನಿಗೆಕರೆದುಕೊಂಡು ಹೋದರು.ಅಲ್ಲಿಂದ ಆಂಬುಲೆನ್ಸ್ ಮೂಲಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದರು. ಅವರಿಗೆ ವೈದ್ಯಾಧಿಕಾರಿ ಡಾ. ಜಗದೀಶ ನಾಯಕ ಪ್ರಾಥಮಿಕ ಚಿಕಿತ್ಸೆ ನೀಡಿದರು. ಪೊಲೀಸರು ಆಸ್ಪತ್ರೆಗೆಬಂದುವಿವರ ಪಡೆದುಕೊಂಡಿದ್ದಾರೆ.

ನಿಷೇಧಿತ ಪ್ರದೇಶ:‘ಪ್ಯಾರಡೈಸ್ ಬೀಚ್’ಗೆ ಸಾಗುವ ದಾರಿಯು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ. ಕಾಲುದಾರಿಯು ದುರ್ಗಮ ಪ್ರದೇಶವಾಗಿದ್ದು, ಅಲ್ಲಿಗೆ ಟ್ರೆಕಿಂಗ್‌ ಹೋಗುವುದನ್ನು ನಿಷೇಧಿಸಲಾಗಿದೆ. ಅನಿವಾರ್ಯ ಕಾರಣಗಳಿಂದ ಅಲ್ಲಿಗೆ ಹೋಗುವವರು ದೋಣಿಗಳಲ್ಲೇ ಸಂಚರಿಸುತ್ತಾರೆ. ಆದರೂ ಈಗ ಪ್ರವಾಸಿಗರನ್ನು ಕರೆದುಕೊಂಡು ಹೋದವರು ಯಾರು ಎಂಬಬಗ್ಗೆ ಚರ್ಚೆಯಾಗುತ್ತಿದೆ.

ಈ ಭಾಗದಲ್ಲಿ ಏನಾದರೂ ಅವಘಡಗಳಾದರೆ ತಕ್ಷಣವೇ ರಕ್ಷಿಸುವುದು ಕಷ್ಟವಾಗುತ್ತದೆ. ಅಗತ್ಯ ಭದ್ರತೆಒದಗಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ಪ್ಯಾರಡೈಸ್ ಬೀಚ್‌ಗೆ ತೆರಳುವುದನ್ನುಪೊಲೀಸರೂ ನಿರ್ಬಂಧಿಸಿದ್ದರು. ಸುಮಾರು 10 ವರ್ಷಗಳ ಹಿಂದೆಈ ಪ್ರದೇಶದಲ್ಲಿ ವಿದೇಶಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವಾದ ಪ್ರಕರಣವೂ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT