ಗುರುವಾರ , ಮೇ 26, 2022
23 °C

ಬೆಂಗಳೂರಿನಿಂದ ಬೆಳಗಾವಿ, ಮೈಸೂರಿಗೆ ಮೇ 22ರಿಂದ ರೈಲು ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲು ಸಂಚಾರ– ಸಾಂದರ್ಭಿಕ ಚಿತ್ರ

ಬೆಳಗಾವಿ: ಬೆಂಗಳೂರಿನಿಂದ ಬೆಳಗಾವಿ ಹಾಗೂ ಮೈಸೂರಿಗೆ ಮೇ 22ರಿಂದ ಪ್ರಾಯೋಗಿಕವಾಗಿ 2 ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನವಿ ಮೇರೆಗೆ ರೈಲುಗಳ ಸಂಚಾರ ಆರಂಭಿಸುತ್ತಿದ್ದೇವೆ. ಜನರು ಅಂತರ ಕಾಪಾಡಿಕೊಳ್ಳಬೇಕು. ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಂಚರಿಸಬೇಕು’ ಎಂದು ಕೋರಿದರು.

‘ಮೊದಲಿನಂತೆ ರೈಲು ನಿಲ್ದಾಣಕ್ಕೆ ಬಂದು ಜಮಾಯಿಸಬಾರದು. ಬಂದು ಆತಂಕಕ್ಕೆ ಒಳಗಾಗಬಾರದು. ಕಡ್ಡಾಯವಾಗಿ ಆನ್‌ಲೈನ್‌ನಲ್ಲಿಯೇ ಟಿಕೆಟ್ ಬುಕ್‌ ಮಾಡಬೇಕು. ಟಿಕೆಟ್ ಕನ್ಫರ್ಮ್ ಆದ ಮೇಲಷ್ಟೇ ನಿಲ್ದಾಣಕ್ಕೆ ಬರಬೇಕು’ ಎಂದು ತಿಳಿಸಿದರು.

ಬೆಂಗಳೂರಿನಿಂದ ಬೆಳಗಾವಿ ಹಾಗೂ ಮೈಸೂರಿಗೆ ವಿಶೇಷ ರೈಲು; ಇಲ್ಲಿದೆ ಎಕ್ಸ್‌ಪ್ರೆಸ್‌ ರೈಲು ನಿಲುಗಡೆ ಹಾಗೂ ಸಂಚರಿಸುವ ದಿನಗಳ ಮಾಹಿತಿ:–

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು