ಗುರುವಾರ , ಜೂನ್ 17, 2021
29 °C

ನಿಮ್ಮ ಸ್ಮರಣೆ ‘ಅಮರ’ ಪ್ರೀತಿ: ಅಂಬರೀಶ್‌ ಜನ್ಮದಿನಕ್ಕೆ ಸುಮಲತಾ ಟ್ವೀಟ್‌  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂದು (ಮೇ.29) ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ 69ನೇ ಜನ್ಮದಿನ. ಹೀಗಾಗಿ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಂದ ಅಭಿಮಾನ, ಪ್ರೀತಿಯ ಹೊಳೆಯೇ ಹರಿಯುತ್ತಿದೆ. ಇದೆಲ್ಲದರ ಮಧ್ಯೆ ಅಂಬಿ ಪತ್ನಿ ಸಂಸದೆ ಸುಮಲತಾ ಅವರ ಸ್ಮರಣೆ ವಿಶಿಷ್ಟವಾಗಿದೆ. 

‘ನಿಮ್ಮ ನೆನಪೇ ನಿತ್ಯ ಜ್ಯೋತಿ, ನಿಮ್ಮ ಸ್ಮರಣೆಯೇ ಅಮರ ಪ್ರೀತಿ,’ ಎಂದು ಅವರು ಟ್ವೀಟ್‌ ಮಾಡಿ ಅಂಬರೀಶ್‌ ಅವರನ್ನು ನೆನಪಿಸಿಕೊಂಡಿದ್ದಾರೆ.  

ಮತ್ತೊಂದು ಟ್ವೀಟ್‌ನಲ್ಲಿ ‘ಅವರು (ಅಂಬರೀಶ್‌) ಇಂದು 68 ನೇ ವರ್ಷಕ್ಕೆ ಕಾಲಿಡುತ್ತಿದ್ದರು. ವಿಧಿ ಅವರು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಅವರ ಹೃದಯ ವಿಶ್ವದಂತೆ. ಜೀವನದಲ್ಲಿ ಅವರೊಂದಿಗೆ ಕೆಲವು ಹೆಜ್ಜೆಗಳನ್ನು ಹಾಕಿದ್ದು ಹೆಮ್ಮೆ ಎನಿಸುತ್ತಿದೆ,’ ಎಂದು ಹೇಳಿಕೊಂಡಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು