ಮಂಗಳವಾರ, ಏಪ್ರಿಲ್ 20, 2021
32 °C
ಜಲಾಶಯದಲ್ಲಿ ಕೇವಲ 62 ಟಿ.ಎಂ.ಸಿ ಅಡಿ ನೀರು ಸಂಗ್ರಹ

ಮಳೆ ಕೊರತೆ: ಸೂಪಾಕ್ಕೆ ಒಳಹರಿವು ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ಕಾಳಿ ನದಿಯ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳು ಪ್ರಸಕ್ತ ಸಾಲಿನ ಮಳೆ ಆರಂಭದಲ್ಲಿ ಮೈತುಂಬಿಕೊಂಡವು. ಆದರೆ, ಇದೇ ನದಿಯ ಪ್ರಮುಖ ಜಲಾಶಯ ಸೂಪಾದಲ್ಲಿ ಜುಲೈ 17ರವರೆಗೆ ಕಳೆದ ವರ್ಷಕ್ಕಿಂತ ನಾಲ್ಕು ಮೀಟರ್‌ಗಳಷ್ಟು ಕಡಿಮೆ ನೀರು ಸಂಗ್ರಹವಾಗಿದೆ.‌

564 ಮೀಟರ್ ಎತ್ತರವಿರುವ ಈ ಜಲಾಶಯದಲ್ಲಿ 1,057 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 147.50 ಟಿ.ಎಂ.ಸಿ ಅಡಿ ನೀರು ಸಂಗ್ರಹವಾಗುತ್ತದೆ. ಕಳೆದ ವರ್ಷ ಈ ಹೊತ್ತಿಗೆ ಜಲಾಶಯವು ಶೇ 50ರಷ್ಟು ತುಂಬಿತ್ತು. ಆದರೆ, ಈ ಬಾರಿ ಸದ್ಯ 540.70 ಮೀಟರ್ ತುಂಬಿದ್ದು, ಶೇಕಡಾ 43.03ರಷ್ಟು ಭರ್ತಿಯಾಗಿದೆ. ಕೇವಲ 62 ಟಿ.ಎಂ.ಸಿ ಅಡಿ ನೀರಿನ ಸಂಗ್ರಹವಿದೆ. 

ಸೂಪಾ ಜಲಾಶಯದ ಹಿನ್ನೀರಿನ ಪ್ರದೇಶವಾದ ಡಿಗ್ಗಿ, ರಾಮನಗರ, ಕುಂಡಲ್ ಪ್ರದೇಶದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಮಳೆ ದಾಖಲಾಗಿದೆ. ಈ ಭಾಗದ ಪ್ರಮುಖ ನದಿಗಳಾದ ಪಾಂಡ್ರಿ, ಕಾಳಿ, ನಾಶಿ ಹಾಗೂ ಕಾನೇರಿ ನದಿಗಳಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಇಳಿದಿದೆ.

ಕಳೆದ ವಾರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿತ್ತು. ಆದರೆ, ಭಾನುವಾರದಿಂದ ಮತ್ತೆ ಮಳೆ ಕೈಕೊಟ್ಟಿದೆ. ಹೀಗಾಗಿ, ಸೂಪಾ ಜಲಾಶಯಕ್ಕೆ ಒಳಹರಿವು ಬಹಳ ಕಡಿಮೆಯಾಗಿದೆ. ಬುಧವಾರ ಜಲಾಶಯಕ್ಕೆ 8,900 ಕ್ಯುಸೆಕ್ ಮಾತ್ರ ದಾಖಲಾಗಿದೆ. ಈ ಬಾರಿ ಜಲಾಶಯದಿಂದ ಒಮ್ಮೆಯೂ ನೀರನ್ನು ಹೊರಗೆ ಹರಿಸಿಲ್ಲ. 

ಈ ಜಲಾಶಯದ ಹಿನ್ನೀರಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಕ್ಯಾಸಲ್‌ರಾಕ್‌ನಲ್ಲಿ ಇಲ್ಲಿಯ ತನಕ 2,230 ಮಿಲಿಮೀಟರ್ ಮಳೆ ದಾಖಲಾಗಿದೆ. ಜುಲೈ 11ರಂದು 203 ಮಿಲಿಮೀಟರ್ ಮಳೆಯಾಗಿದ್ದು ಈ ವರ್ಷದ ದಾಖಲೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು