ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30ರಿಂದ ಮತ್ತೆ ಶಿಕ್ಷಕರ ವರ್ಗಾವಣೆ

Last Updated 27 ಸೆಪ್ಟೆಂಬರ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸುವುದಕ್ಕೆ ಚುನಾವಣಾ ಆಯೋಗ ಶುಕ್ರವಾರ ರಾತ್ರಿ ಲಿಖಿತ ಅನುಮತಿ ನೀಡಿದೆ. ಹೀಗಾಗಿ ಸೋಮವಾರದಿಂದ ಪರಿಷ್ಕೃತ ವೇಳಾಪಟ್ಟಿಯೊಂದಿಗೆ ವರ್ಗಾವಣೆ ಕೌನ್ಸೆಲಿಂಗ್‌ ಪುನರಾರಂಭಗೊಳ್ಳಲಿದೆ.

ಪರಿಷ್ಕೃತ ವೇಳಾಪಟ್ಟಿಯನ್ನು ಶುಕ್ರವಾರ ರಾತ್ರಿಯೇ http://www.schooleducation.kar.nic.in ಇಲ್ಲಿ ಅಪ್‌ಲೋಡ್‌ ಮಾಡಲಿದ್ದು, ಶನಿವಾರ ಶಿಕ್ಷಕರು ಇದನ್ನು ನೋಡಿಕೊಂಡು ಸೋಮವಾರದಿಂದ ಕೌನ್ಸೆಲಿಂಗ್‌ಗೆ ಹಾಜರಾಗಬೇಕು.

ಪ್ರತಿ ದಿನ 300 ಮಂದಿಗೆ ಕೌನ್ಸೆಲಿಂಗ್‌ಗೆ ಅವಕಾಶ ನೀಡಲಾಗುತ್ತದೆ ಎಂದುಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಸುಮಾರು ಪ್ರಾಥಮಿಕ ಶಾಲೆಯ 13 ಸಾವಿರ ಮತ್ತು ಪ್ರೌಢಶಾಲೆಯ 3 ಸಾವಿರ ಸೇರಿದಂತೆ ಸುಮಾರು 16 ಸಾವಿರ ಶಿಕ್ಷಕರು ವರ್ಗಾವಣೆಗೊಳ್ಳುತ್ತಿದ್ದು, ಎರಡೂ ವಿಭಾಗಗಳ ಅಂತರ ಘಟಕ ವರ್ಗಾವಣೆ ಇದೀಗ ಪ್ರಗತಿಯಲ್ಲಿದೆ.

ಈ ವಿಭಾಗದಲ್ಲಿ ಸುಮಾರು 11 ಸಾವಿರದಷ್ಟು ಶಿಕ್ಷಕರ ವರ್ಗಾವಣೆ ನಡೆಯಲಿಕ್ಕಿದೆ.

ಪ್ರತಿ ದಿನ 250ರಿಂದ 300 ಮಂದಿಗೆ ಮಾತ್ರ ಕೌನ್ಸೆಲಿಂಗ್‌ ನಡೆಸುವುದು ಸಾಧ್ಯವಾಗುತ್ತಿದೆ. ಹೀಗಾಗಿ ಅಕ್ಟೋಬರ್‌ ಕೊನೆಯ ವಾರದವರೆಗೂ ಈ ಪ್ರಕ್ರಿಯೆ ಮುಂದುವರಿಯುವ ನಿರೀಕ್ಷೆ ಇದೆ. ಕೊನೆಯ ಹಂತದಲ್ಲಿ ಘಟಕದ ಹೊರಗೆ ಮತ್ತು ಪರಸ್ಪರ ವರ್ಗಾವಣೆಯಷ್ಟೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT