ಶನಿವಾರ, ಏಪ್ರಿಲ್ 4, 2020
19 °C
ಶಿಕ್ಷಕರ ವರ್ಗಾವಣೆ ಕಾಯ್ದೆ: ಮೇಲ್ಮನೆ ಅಂಗೀಕಾರ

ಸಿಎಂ ಶಿಫಾರಸು ಇದ್ದರೂ ಶಿಕ್ಷಕರ ವೈಯಕ್ತಿಕ ವರ್ಗಾವಣೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಿಕ್ಷಕರ ವರ್ಗಾವಣೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ರೂಪಿಸಿರುವ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ವಿಧಾನ ಪರಿಷತ್‌ ಬುಧವಾರ ಅಂಗೀಕಾರ ನೀಡಿತು.

ವಿವಿಧ ಪಕ್ಷಗಳ 17 ಸದಸ್ಯರು ನಿಯಮ ರೂಪಿಸುವಾಗ ಕೆಲವೊಂದು ತಿದ್ದುಪಡಿಗಳನ್ನು ಮಾಡಬೇಕು ಎಂದು ಸಲಹೆ ನೀಡಿ,  ಮಸೂದೆಯನ್ನು ಸ್ವಾಗತಿಸಿದರು.

‘ಮುಖ್ಯಮಂತ್ರಿ ಮತ್ತು ಶಾಸಕರ ಒತ್ತಾಯಕ್ಕೆ ಮಣಿದು ವೈಯಕ್ತಿಕ ನೆಲೆಯಲ್ಲಿ ವರ್ಗಾವಣೆ ಮಾಡುವುದಿಲ್ಲ, ಜನಗಣತಿ ಸಹಿತ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ವರ್ಗಾವಣೆ ಸಾಧ್ಯವಾಗದ ಸಂದರ್ಭದಲ್ಲಿ ಮಾತ್ರ ಸಾಮೂಹಿಕ ವರ್ಗಾವಣೆಗೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ’ ಎಂದು ಸಚಿವ ಸುರೇಶ್‌ಕುಮಾರ್ ಭರವಸೆ ನೀಡಿದರು.

ಸದಸ್ಯರ ಸಲಹೆಗಳನ್ನು ನಿಯಮ ರೂಪಿಸುವಾಗ ಸೇರಿಸಿಕೊಳ್ಳಲಾಗುವುದು ಎಂದೂ ಅವರು ಹೇಳಿದರು. ಸದನ ಧ್ವನಿಮತದಿಂದ ಮಸೂದೆ ಅಂಗೀಕರಿಸಿತು.

ಹೊರಟ್ಟಿ ಕೊಡುಗೆಗೆ ಮೆಚ್ಚುಗೆ: ಸರ್ಕಾರ ರೂಪಿಸಿರುವ ವರ್ಗಾವಣೆ ಮಸೂದೆಗೆ ಬೀಜ ಬಿತ್ತಿದವರು ಬಸವರಾಜ ಹೊರಟ್ಟಿ. ಭಾರಿ ಭ್ರಷ್ಟಾಚಾರ ತಪ್ಪಿಸಲು ಅವರು ರೂಪಿಸಿದ ಕಾಯ್ದೆ ರಾಜ್ಯದ ಇತಿಹಾಸದಲ್ಲಿ ಒಂದು ದಿಟ್ಟ ಹೆಜ್ಜೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು