ಬುಧವಾರ, ಮೇ 27, 2020
27 °C

ಚಿಕಿತ್ಸೆಗೆ ಒಪ್ಪದವರು ಭಯೋತ್ಪಾದಕರ ಮನಸ್ಥಿತಿಯವರು: ಸೋಮಶೇಖರ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ದೆಹಲಿಯ ತಬ್ಲೀಗ್‌ ಜಮಾತ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಬಂದು ಕೊರೊನಾ ಚಿಕಿತ್ಸೆಗೆ ಒಳಪಡದವರು ಭಯೋತ್ಪಾದಕರ ಮನಃಸ್ಥಿತಿಯವರು’ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಆರೋಪಿಸಿದರು.

ನಗರದ ಭತ್ರಿ ಪ್ರದೇಶದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಉಚಿತ ಔಷಧಿ ವಿತರಣೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ‌ ಅವರು ಮಾತನಾಡಿದರು.

‘ಎಲ್ಲರೂ ಹಾಗಿಲ್ಲ. ಆದರೆ, ವಿನಾಕಾರಣ ಅಸಹಕಾರ ತೋರಿಸುವವರು ಅದೇ ಮನಸ್ಥಿತಿಯವರು. ಕೆಲವರು ಒಳ್ಳೆಯವರಂತೆ ಕಾಣುತ್ತಾರಷ್ಟೇ. ಅಂಥವರಿಂದಾಗಿಯೇ ತಮಿಳು ನಾಡು, ಆಂಧ್ರದಲ್ಲಿ ಕೊರೊನಾ ಹೆಚ್ಚಾಗಿದೆ‌’ ಎಂದರು.

‘ಯಾರು ಏನೇ ದುರಾಲೋಚನೆ ಮಾಡಿದರೂ ನಮ್ಮ ರಾಮ, ಈಶ್ವರ ಭಗವಂತ ನಮ್ಮನ್ನ ಕಾಪಾಡುತ್ತಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು