ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರಿನಿಂದ ದುಬೈವರೆಗೆ ಪಯಣ..

Last Updated 10 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇಲ್ಲಿನ ದೇವರಗುಡ್ಡ ರಸ್ತೆಯ ಕೂನಬೇವು ಪ್ಲಾಟ್‌ನ ಹನುಮಂತದೇವರ ದೇವಸ್ಥಾನದ ಬಳಿಯ ನಿವಾಸಿರಾಕೇಶ್‌ ಬಸಯ್ಯ ಕಿತ್ತೂರುಮಠ, ಎಸ್ಸೆಸ್ಸೆಲ್ಸಿ ಬಳಿಕ ಐಟಿಐ ಎಲೆಕ್ಟ್ರಿಕಲ್‌ ಓದಿದ್ದು, ನಂತರ ಬೆಂಗಳೂರಿನ ಕಂಪನಿಯೊಂದರಲ್ಲಿ ಎಲೆಕ್ಟ್ರಿಕಲ್‌ ವೈರಿಂಗ್ ಮತ್ತು ಎಲೆಕ್ಟ್ರಾನಿಕ್ಸ್‌ ಮಷಿನ್ ದುರಸ್ತಿ ಕೆಲಸ ಮಾಡುತ್ತಿದ್ದರು.

ನಾಲ್ಕು ವರ್ಷಗಳ ಹಿಂದೆ ದುಬೈಗೆ ಹೋಗಿ ಗೆಳೆಯರೊಂದಿಗೆ ವಾಸವಾಗಿದ್ದರು. ಯಾವುದೇ ಸಂಘಟನೆ ಅಥವಾ ಪಕ್ಷದ ಜೊತೆಗೆ ಅವರು ಗುರುತಿಸಿಕೊಂಡಿಲ್ಲ.

ದುಬೈನಲ್ಲಿ ಕುಟುಂಬ ನಿರ್ವಹಣೆ ಆರ್ಥಿಕವಾಗಿ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಪತ್ನಿ ಹಾಗೂ ಮಕ್ಕಳನ್ನು ರಾಣೆಬೆನ್ನೂರಿನಲ್ಲಿ ತಾಯಿಯ ಬಳಿ ಇರಿಸಿದ್ದು, ಆಗಾಗ ರಾಣೆಬೆನ್ನೂರಿಗೆ ಬರುತ್ತಿದ್ದರು.

ರಾಕೇಶ್‌ನ ತಂದೆ ಬಸಯ್ಯ ದೊಡ್ಡಪೇಟೆಯಲ್ಲಿ ವಿಭೂತಿ ತಯಾರಿಸುತ್ತಿದ್ದರು. ಮನೆಯಲ್ಲಿ ವಿಭೂತಿ ತಯಾರಿಸಿ ಜಾತ್ರೆಗಳಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು.ರಾಕೇಶ್‌ಬಾಲ್ಯದಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು.

ಈತನಿಗೆ ಇಬ್ಬರು ಸಹೋದರರಿದ್ದು ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ತಾಯಿ ಹಾಗೂ ಪತ್ನಿ ಮನೆಗೆಲಸ ಮಾಡುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ಪತ್ನಿ ಹಾಗೂ ಮಕ್ಕಳನ್ನು ನೋಡಿಕೊಂಡು ರಾಣೆಬೆನ್ನೂರಿನಿಂದ ದುಬೈಗೆ ಹೋಗಿದ್ದರು ಎಂದು ತಾಯಿ ಮತ್ತು ಪತ್ನಿ ತಿಳಿಸಿದ್ದಾರೆ. ಪ್ರತಿದಿನ ಕುಟುಂಬದವರೊಂದಿಗೆ ಮೊಬೈಲ್‌ ಮೂಲಕ ಸಂಪರ್ಕಿಸುತ್ತಿದ್ದರಾಕೇಶ್‌, ಶುಕ್ರವಾರ ಬೆಳಿಗ್ಗೆ ಕೂಡ ತಾಯಿ, ಪತ್ನಿ, ಮಕ್ಕಳು ಮತ್ತು ಸಹೋದರರ ಜೊತೆಗೂ ಮಾತನಾಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT