ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಇಲ್ಲದಿದ್ದರೆ ದೇವೇಗೌಡರಿಗೆ 2  ಲಕ್ಷ ಮತಗಳಿಂದ ಗೆಲುವು: ಶಾಸಕ ಗೌರಿಶಂಕರ್

Last Updated 26 ಮೇ 2019, 13:39 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಯಾಗಿವೆ.ಈ ಮೈತ್ರಿ ಸಹವಾಸ ಇಲ್ಲದೇ ಇದ್ದಿದ್ದರೆ ಎಚ್.ಡಿ.ದೇವೇಗೌಡರು 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದರು ಎಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಶಾಸಕ ಡಿ.ಸಿ. ಗೌರಿಶಂಕರ್ ಹೇಳಿದರು.

ಜೆಡಿಎಸ್ ಕಚೇರಿಯಲ್ಲಿ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ‘ಕುಮಾರಣ್ಣ ಬೈದರು ಚಿಂತೆ ಇಲ್ಲ. ದೇವೇಗೌಡರು ನನ್ನನ್ನು ಪಕ್ಷದಿಂದ ಆಚೆ ಹಾಕಿದರೂ ಚಿಂತೆ ಇಲ್ಲ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿ ಸಾಕು‘ ಎಂದರು.

ಮೈತ್ರಿ ಎಂದರೆ ಏನು? ಅವರನ್ನು ಇವರು ಸೋಲಿಸುವುದು, ಇವರನ್ನು ಅವರು ಸೋಲಿಸುವುದೇ ಎಂದರು.

ಆ ಶಾಸಕ ಮುಂಬೈಗೆ ಹೋದನಂತೆ, ಆಪರಷನ್ ಕಮಲ ಅಯ್ತಂತೆ ಬರೀ ಇದೇ ಗೊಂದಲದಲ್ಲಿ ಮುಳುಗಿ ಹೋಗಿದ್ದು, ಜನ ಗಮನಿಸಿದ್ದಾರೆ. ಅದು ಈ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದರು.

ಎರಡೂ ಪಕ್ಷದ ಮುಖಂಡರು ಒಂದಾದೆವು. ಆದರೆ ತಳ ಮಟ್ಟದಲ್ಲಿ ಕಾರ್ಯಕರ್ತರು ಒಂದಾಗಲೇ ಇಲ್ಲ. ಅದು ಫಲಿತಾಂಶ ಕಡಿಮೆ ಆಗಲು ಕಾರಣವಾಗಿದೆ ಎಂದರು.

ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಬಾಯಿಗೆ ಬಂದಂತೆ ಮಾತನಾಡುವುದು ನಿಲ್ಲಿಸಬೇಕು. ಮೈತ್ರಿ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸಿದ್ದರೆ ಹೇಳಿಕೊಳ್ಳಲಿ ಎಂದು ಸವಾಲು ಹಾಕಿದರು.

ಪಕ್ಷದ ವರಿಷ್ಠರು ಒಪ್ಪಿಗೆ ಸೂಚಿಸಿದರೆ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಿ ಕೆ.ಎನ್.ರಾಜಣ್ಣ ಸ್ಪರ್ಧಿಸುತ್ತಾರೊ ಅಲ್ಲಿ ನಾನೇ ಸ್ಪರ್ಧೆ ಮಾಡುತ್ತೇನೆ ಎಂದರು.

ಒಂದಾಗಿದ್ದರೆ ಮೈತ್ರಿ. ಇಲ್ಲದೇ ಇದ್ದರೆ ಕಷ್ಟ. ಆ ಪಕ್ಷದವರು ಒಂದು ಹೇಳಿಕೆ ನೀಡುವುದುನಮ್ಮ ಪಕ್ಷದವರು ಅದಕ್ಕೆ ಇನ್ನೇನೊ ಹೇಳುವುದು ಆದರೆ ಮೈತ್ರಿಗೆ ಅರ್ಥವಿಲ್ಲ. ರಾಜ್ಯದ ಜನರಿಗೆ ಇದು ಸಾಕಾಗಿ ಹೋಗಿದೆ. ನಾವಂತೂ ಮೈತ್ರಿಯಿಂದ ಹೊರ ಬರಲು ರೆಡಿ. ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT