ಪುತ್ತಿಗೆ ಶ್ರೀಗಳ ಶಿಷ್ಯ ಸ್ವೀಕಾರ ವಿರುದ್ಧ ಕಾನೂನು ಸಮರ

ಶನಿವಾರ, ಮೇ 25, 2019
27 °C
ಉತ್ತರಾಧಿಕಾರಿ ನೇಮಕಕ್ಕೆ ತಡೆ ನೀಡುವಂತೆ ವಿಶ್ವವಿಜಯ ಸ್ವಾಮೀಜಿ ಮನವಿ

ಪುತ್ತಿಗೆ ಶ್ರೀಗಳ ಶಿಷ್ಯ ಸ್ವೀಕಾರ ವಿರುದ್ಧ ಕಾನೂನು ಸಮರ

Published:
Updated:
Prajavani

ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ನಿಯಮಬಾಹಿರವಾಗಿ ಶಿಷ್ಯ ಸ್ವೀಕಾರ ಮಾಡಿಕೊಂಡಿದ್ದಾರೆ. ವೇದ, ಸಂಸ್ಕೃತದ ಜ್ಞಾನ ಇಲ್ಲದ ವ್ಯಕ್ತಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ಈ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ವಿಶ್ವವಿಜಯ ಸ್ವಾಮೀಜಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಪುತ್ತಿಗೆ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಪ್ರಶಾಂತ್ ಆಚಾರ್ಯ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದು, ಅವರಿಗೆ ಸಂಸ್ಕೃತದ ಸಾಮಾನ್ಯ ಜ್ಞಾನವೂ ಇಲ್ಲ. ಮಧ್ವಾಚಾರ್ಯರ ಧಾರ್ಮಿಕ ಚಿಂತನೆಗಳ ಅರಿವಿಲ್ಲ. ಅರ್ಹತೆ ಇಲ್ಲದ ವ್ಯಕ್ತಿಗೆ ಕೃಷ್ಣನ ಪೂಜೆ ಮಾಡಲು ಅವಕಾಶ ನೀಡಬಾರದು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಹಿಂದಿನ ಪಲಿಮಾರು ಮಠದ ವಿದ್ಯಾಮಾನ್ಯ ತೀರ್ಥರು, ಶಿಷ್ಯ ಸ್ವೀಕಾರ ವಿಚಾರವಾಗಿ ‘ವಿದ್ಯಾವಸಂತ’ ಪುಸ್ತಕ ರಚಿಸಿದ್ದರು. ಅದರಲ್ಲಿ ಉತ್ತರಾಧಿಕಾರಿಯಾಗಿ ನೇಮಕವಾಗುವ ವ್ಯಕ್ತಿ ಕನಿಷ್ಠ 10 ವರ್ಷ ಸಂಸ್ಕೃತ ಅಧ್ಯಯನ ಮಾಡಿರಬೇಕು ಎಂಬ ಉಲ್ಲೇಖವಿದೆ. ಈ ನಿಯಮವನ್ನು ಪುತ್ತಿಗೆ ಶ್ರೀಗಳು ಉಲ್ಲಂಘಿಸಿದ್ದಾರೆ ಎಂದು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !