ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 23 ಮಂದಿಗೆ ಸೋಂಕು, ಮೂವರು ಪೊಲೀಸರಲ್ಲಿ ಕೊರೊನಾ ದೃಢ, ಪೊಲೀಸ್ ಠಾಣೆ ಬಂದ್

Last Updated 24 ಮೇ 2020, 13:57 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಭಾನುವಾರ 23 ಮಂದಿಯಲ್ಲಿ ಕೋವಿಡ್–19 ಸೋಂಕು ಪತ್ತೆಯಾಗಿದ್ದು, ಸೋಂಕಿತರಲ್ಲಿ ಮೂವರು ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ. ಒಂದು ಹಾಗೂ ಎರಡು ವರ್ಷದ ಮಗು, ನಾಲ್ಕು ವರ್ಷದ ಇಬ್ಬರು ಬಾಲಕರು ಹಾಗೂ 9 ತಿಂಗಳ ತುಂಬು ಗರ್ಭಿಣಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.

ಪೊಲೀಸ್ ಠಾಣೆ ತಾತ್ಕಾಲಿಕ ಬಂದ್:ಸೋಂಕಿತ ಕಾನ್‌ಸ್ಟೆಬಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದಕಾರ್ಕಳ ಗ್ರಾಮಾಂತರ ಠಾಣೆ, ಅಜೆಕಾರು ಹಾಗೂ ಬ್ರಹ್ಮಾವರ ಠಾಣೆಗಳನ್ನು ಮುಚ್ಚಲಾಗಿದೆ. ಸೋಂಕಿತರ ಜತೆಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ. ಠಾಣೆಗಳನ್ನು ಸ್ಯಾನಿಟೈಸರ್‌ನಿಂದ ಶುದ್ಧಗೊಳಿಸಿ 48 ಗಂಟೆಗಳ ಬಳಿಕ ಬಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

ಗರ್ಭಿಣಿಗೆ ಸೋಂಕು:ಕಾರ್ಕಳ ತಾಲ್ಲೂಕಿನ 9 ತಿಂಗಳ ಗರ್ಭಿಣಿಗೆ ಸೋಂಕು ತಗುಲಿದೆ. ಗರ್ಭಿಣಿಗೆ ಹೇಗೆ, ಎಲ್ಲಿಂದ ಸೋಂಕು ಹರಡಿತು ತಿಳಿಯುತ್ತಿಲ್ಲ. ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

16 ಮಹಾರಾಷ್ಟ್ರ, ತಲಾ ಒಬ್ಬರು ತೆಲಂಗಾಣ, ಯುಎಇಯಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮೂವರಿಗೆ ಕಂಟೈನ್ ಝೋನ್‌ಗೆ ತೆರಳಿದ್ದರಿಂದ ತಗುಲಿದೆ ಎಂದು ತಿಳಿಸಿದ್ದಾರೆ.

ಸೋಂಕಿತರ ಸಂಖ್ಯೆ76ಕ್ಕೆಏರಿಕೆ:ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿಗೆ ಒಬ್ಬರು ಮೃತಪಟ್ಟು, ಮೂವರು ಗುಣಮುಖರಾಗಿದ್ದಾರೆ. 72 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರ ಸಂಖ್ಯೆ 76ಕ್ಕೇರಿಕೆಯಾಗಿದೆ. ನೆರೆಯ ದಕ್ಷಿಣ ಕನ್ನಡ (58), ಉತ್ತರ ಕನ್ನಡ (68) ಜಿಲ್ಲೆಗಿಂತಲೂ ಸೋಂಕು ಉಡುಪಿಯಲ್ಲಿ ಹೆಚ್ಚಾಗಿದೆ.

ಕಂಟೈನ್‌ಮೆಂಟ್ ಝೋನ್‌ಗೆ ಡಿಸಿ ಭೇಟಿ:ಕಾರ್ಕಳದ ಕಂಟೈನ್‌ಮೆಂಟ್ ಝೋನ್‌ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು. ಕಂಟೈನ್‌ಮೆಂಟ್ ವಲಯದಲ್ಲಿರುವ ಹೋಟೆಲ್‌ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿನ ವ್ಯವಸ್ಥೆಯನ್ನು ವೀಕ್ಷಿಸಿದರು.

1,301 ಮಾದರಿ ರವಾನೆ

ಭಾನುವಾರ 1301 ಮಂದಿಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತೀವ್ರ ಉಸಿರಾಟದ ಸಮಸ್ಯೆ ಇದ್ದ 8, ಸೋಂಕಿತರ ಸಂಪರ್ಕ ಹೊಂದಿರುವ 28 ಹಾಗೂ ಇತರೆ ಕೋವಿಡ್‌ ಹಾಟ್ ಸ್ಪಾಟ್‌ಗಳಿಂದ ಬಂದಿರುವ 1246, ಐಎಲ್‌ಐ ಲಕ್ಷಣ ಇರುವ 19 ಜನರ ಮಾದರಿಯನ್ನು ರವಾನಿಸಲಾಗಿದೆ. 3,762 ಜನರ ವರದಿ ಬರುವುದು ಬಾಕಿ ಇದೆ. ಸೋಂಕಿನ ಲಕ್ಷಣಗಳಿದ್ದ 12 ಮಂದಿಗೆ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತರ ವಿವರ

ವಯಸ್ಸು–ಲಿಂಗ–ಸಂಪರ್ಕ

35–ಮಹಿಳೆ–ಮಹಾರಾಷ್ಟ್ರ

51–ಪುರುಷ–ಕಂಟೈನ್‌ಮೆಂಟ್ ಝೋನ್

41–ಪುರುಷ–ಕಂಟೈನ್‌ಮೆಂಟ್ ಝೋನ್

32–ಪುರುಷ–ಮಹಾರಾಷ್ಟ್ರ

4–ಬಾಲಕ–ಮಹಾರಾಷ್ಟ್ರ

50–ಗಂಡು–ಮಹಾರಾಷ್ಟ್ರ

22–ಮಹಿಳೆ–ಸಂಪರ್ಕ ಪತ್ತೆ

37–ಪುರುಷ–ಮಹಾರಾಷ್ಟ್ರ

26–ಪುರುಷ–ಮಹಾರಾಷ್ಟ್ರ

24–ಮಹಿಳೆ–ಮಹಾರಾಷ್ಟ್ರ

35–ಮಹಿಳೆ–ಮಹಾರಾಷ್ಟ್ರ

1–ಮಗು–ಮಹಾರಾಷ್ಟ್ರ

29–ಪುರುಷ–ಕಂಟೈನ್‌ಮೆಂಟ್ ಝೋನ್

4–ಬಾಲಕ–ಮಹಾರಾಷ್ಟ್ರ

29–ಮಹಿಳೆ–ಮಹಾರಾಷ್ಟ್ರ

48–ಪುರುಷ–ಮಹಾರಾಷ್ಟ್ರ

23–ಮಹಿಳೆ–ಮಹಾರಾಷ್ಟ್ರ

29–ಮಹಿಳೆ–ಸಂಪರ್ಕ ಪತ್ತೆ

30–ಪುರುಷ–ಮಹಾರಾಷ್ಟ್ರ

44–ಮಹಿಳೆ–ಯುಎಇ

2–ಬಾಲಕ–ಮಹಾರಾಷ್ಟ್ರ

45–ಪುರುಷ–ಮಹಾರಾಷ್ಟ್ರ

26–ಪುರುಷ–ತೆಲಂಗಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT