ವಿದ್ಯುತ್‌ ಶುಲ್ಕ ಹೆಚ್ಚಿಸಲು ಎಸ್ಕಾಂ ಬೇಡಿಕೆ

7

ವಿದ್ಯುತ್‌ ಶುಲ್ಕ ಹೆಚ್ಚಿಸಲು ಎಸ್ಕಾಂ ಬೇಡಿಕೆ

Published:
Updated:

ಬೆಂಗಳೂರು: ವಿದ್ಯುತ್‌ ಶುಲ್ಕ ಪ್ರತಿ ಯುನಿಟ್‌ಗೆ ₹ 1ರಿಂದ ₹ 1.65ರಂತೆ ಹೆಚ್ಚಿಸುವಂತೆ ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂ) ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಕೋರಿಕೆ ಸಲ್ಲಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆಇಆರ್‌ಸಿ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ, ‘ದರ ಹೆಚ್ಚಿಸುವಂತೆ ಕೋರಿಕೆ ಸಲ್ಲಿಸಲು ಇದೇ 30 ಕೊನೆಯ ದಿನವಾಗಿತ್ತು. ಆದರೆ, ಈ ಬಗ್ಗೆ ತೀರ್ಮಾನಕ್ಕೆ ಬರಲು ಮುಂದಿನ ಮಾರ್ಚ್‌ವರೆಗೆ ಸಮಯಾವಕಾಶ ಇದೆ’ ಎಂದರು.

ಪ್ರಸಕ್ತ ಸಾಲಿನಲ್ಲಿ (2018–19) ಪ್ರತಿ ಯುನಿಟ್‌ಗೆ 82 ಪೈಸೆಯಿಂದ ₹ 1.62 ಹೆಚ್ಚಿಸುವಂತೆ ಎಸ್ಕಾಂಗಳು ಮನವಿ ಮಾಡಿದ್ದವು. ವಿವಿಧ ವಿಭಾಗಗಳಿಗೆ ಅನ್ವಯಿಸುವಂತೆ 20ರಿಂದ 60 ಪೈಸೆಯಷ್ಟು ಹೆಚ್ಚಿಸಿ ಕೆಇಆರ್‌ಸಿ ಆದೇಶ ಹೊರಡಿಸಿತ್ತು.

2017–18ರಲ್ಲಿ ಪ್ರತಿ ಯುನಿಟ್‌ಗೆ ₹ 1.48ರಂತೆ ಹೆಚ್ಚಿಸಲು ಎಸ್ಕಾಂಗಳು ಕೋರಿಕೆ ಸಲ್ಲಿಸಿದ್ದರೂ ಸರಾಸರಿ 48 ಪೈಸೆ ಹೆಚ್ಚಳ ಮಾಡಲಾಗಿತ್ತು.

ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಬೆಸ್ಕಾಂ, 2019–20 ಸಾಲಿನಲ್ಲಿ ಪ್ರತಿ ಯುನಿಟ್‌ಗೆ ₹ 1 ಹೆಚ್ಚಿಸುವಂತೆ ಕೋರಿಕೆ ಸಲ್ಲಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !