‘ಕ್ಷೇತ್ರ’ ದರ್ಶನ: ಉತ್ತರ ಕನ್ನಡ

ಸೋಮವಾರ, ಮಾರ್ಚ್ 25, 2019
31 °C

‘ಕ್ಷೇತ್ರ’ ದರ್ಶನ: ಉತ್ತರ ಕನ್ನಡ

Published:
Updated:
Prajavani

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಕ್ಷೇತ್ರದಲ್ಲಿ ಮಿಂಚಿನ ಓಡಾಟ ನಡೆಸುತ್ತ, ಚುನಾವಣೆ ಸಿದ್ಧತೆ ಆರಂಭಿಸಿದ್ದಾರೆ. ಕಾರ್ಯಕರ್ತರ ವಿರೋಧ ಇದ್ದರೂ, ಈ ಕ್ಷೇತ್ರದಿಂದ ಐದು ಬಾರಿ ಆಯ್ಕೆಯಾಗಿರುವ ಕಾರಣ ಅವರಿಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತ. ಕಾಂಗ್ರೆಸ್– ಜೆಡಿಎಸ್ ಮೈತ್ರಿಯಲ್ಲಿ ಟಿಕೆಟ್ ಯಾರಿಗೆಂಬುದು ಖಚಿತಗೊಂಡಿಲ್ಲ. ಪಕ್ಷದ ಮತದಾರರು ಹೆಚ್ಚು ಇರುವುದರಿಂದ ತನಗೇ ಟಿಕೆಟ್ ನೀಡಬೇಕೆಂಬ ವಾದವನ್ನು ಕಾಂಗ್ರೆಸ್‌ ಮುಂದಿಟ್ಟಿದೆ. ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಬಲವಾಗಿಲ್ಲ. ಹಿಂದುತ್ವ ವಿಚಾರ ಪ್ರಬಲವಾಗಿರುವ ಕ್ಷೇತ್ರದಲ್ಲಿ, ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

ಆಕಾಂಕ್ಷಿಗಳು:ಬಿಜೆಪಿ: ಅನಂತಕುಮಾರ್ ಹೆಗಡೆ

ಕಾಂಗ್ರೆಸ್: ಜೆ.ಡಿ.ನಾಯ್ಕ, ಭೀಮಣ್ಣ ನಾಯ್ಕ

ಜೆಡಿಎಸ್: ಆನಂದ ಅಸ್ನೋಟಿಕರ್

ಮತದಾರರ ಸಂಖ್ಯೆ: 11,40,316

ವಿಧಾನಸಭಾ ಕ್ಷೇತ್ರವಾರು ಬಲಾಬಲ:

ಬಿಜೆಪಿ: 5

ಶಿರಸಿ–ಸಿದ್ದಾಪುರ, ಕಾರವಾರ, ಕುಮಟಾ, ಭಟ್ಕಳ, ಕಿತ್ತೂರು

ಕಾಂಗ್ರೆಸ್: 3

ಹಳಿಯಾಳ, ಯಲ್ಲಾಪುರ, ಖಾನಾಪುರ

ಒಟ್ಟು: 8

2009ರ ಚುನಾವಣೆ ವಿಜೇತರು: ಅನಂತಕುಮಾರ್ ಹೆಗಡೆ, ಗೆಲುವಿನ ಅಂತರ: 22,769

44.63%;ಬಿಜೆಪಿ;ಅನಂತಕುಮಾರ್ ಹೆಗಡೆ

41.63%;ಕಾಂಗ್ರೆಸ್‌;ಮಾರ್ಗರೆಟ್ ಆಳ್ವ

6.43%;ಜೆಡಿಎಸ್;ವಿ.ಡಿ.ಹೆಗಡೆ

2.08;ಸ್ವತಂತ್ರ;ವೈ.ತಿಮ್ಮಣ್ಣ

1.23%;ಬಿಎಸ್‌ಪಿ;ಎಚ್.ಬಸವರ್

4.0%;ಇತರೆ

2014 ಚುನಾವಣೆ ವಿಜೇತರು: ಅನಂತಕುಮಾರ್ ಹೆಗಡೆ, ಗೆಲುವಿನ ಅಂತರ: 1,40,700

54.64%;ಬಿಜೆಪಿ;ಅನಂತಕುಮಾರ್ ಹೆಗಡೆ

40.58%;ಕಾಂಗ್ರೆಸ್;ಪ್ರಶಾಂತ ಆರ್.ದೇಶಪಾಂಡೆ

0.74%;ಬಿಎಸ್‌ಪಿ;ಸಂತೋಷ ನಾಯ್ಕ

0.63%;ಎಸ್‌ಜೆಪಿ;ಎಲಿಯಾಸ್ ಕಟಿ

0.62%;ಎಎಪಿ;ರಾಘವೇಂದ್ರ ಠಾಣೆ

2.79%;ಇತರೆ

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !