ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖಿಲ್‌ರಿಂದ ನಾವು ಕಲಿಯಬೇಕಿದೆ ಎಂದ ತೇಜಸ್ವಿನಿ ಅನಂತ್‌ಕುಮಾರ್‌

Last Updated 7 ಏಪ್ರಿಲ್ 2019, 3:33 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಅವರಿಂದ ನಾವು ಕಲಿಯುವಂಥದ್ದಿದೆ ಎಂದು ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ್‌ಕುಮಾರ್‌ ಅವರ ಪತ್ನಿ ತೇಜಸ್ವನಿ ಅವರು ಶನಿವಾರ ಟ್ವೀಟ್‌ ಮಾಡಿದ್ದಾರೆ.

ನಿಖಿಲ್ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ, ಕಾರಣ ಏನೇ ಇರಲಿ😇,
ಇದನ್ನು ನಾವೆಲ್ಲ ಕಲಿಲೇಬೇಕು.
ಯಾಕೆ ಗೊತ್ತಾ ?
ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಸ್ಟ್ರಾ ಎಳನೀರು ಕುಡಿದು ಬಿಸಾಕ್ತಿವಿ. ಈ ಸ್ಟ್ರಾಗಳು ಮರುಸಂಸ್ಕರಣೆ ಮಾಡಲಾಗುವುದಿಲ್ಲ. ನೀರಿಗೊ, ಕಾಡಿಗೊ, ಭೂಮಿಗೊ ಸೇರಿ ಮೂಕಪ್ರಾಣಿಗಳಿಗೆ ತೊಂದರೆ
ಸ್ಟ್ರಾ ಉಪಯೋಗ ಬಿಟ್ಹಾಕೋಣ.

ಮಂಡ್ಯದಲ್ಲಿ ಪ್ರಚಾರ ನಿರತರಾಗಿರುವ ನಿಖಿಲ್‌ ಅವರು ಇತ್ತೀಚೆಗೆ ಹಳ್ಳಿಯೊಂದರಲ್ಲಿ ಸ್ಟ್ರಾ ಬಳಸದೇ ಎಳನೀರನ್ನು ಒಂದೇ ಬಾರಿಗೆ ಕುಡಿದ್ದದನ್ನು ಕನ್ನಡದ ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ಇದೇ ಹಿನ್ನೆಲೆಯಲ್ಲಿ ಶನಿವಾರ ಟ್ವೀಟ್‌ ಮಾಡಿರುವ ತೇಜಸ್ವಿನಿ ಅವರು, ‘ನಿಖಿಲ್ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ. ಇದನ್ನು ನಾವೆಲ್ಲ ಕಲಿಲೇಬೇಕು. ಬಳಸಿ ಎಸಿದೆ ಸ್ಟ್ರಾಗಳು ನೀರಿಗೋ, ಕಾಡಿಗೋ, ಭೂಮಿಗೋ ಸೇರಿ ಮೂಕಪ್ರಾಣಿಗಳಿಗೆ ತೊಂದರೆ.ಸ್ಟ್ರಾ ಉಪಯೋಗ ಬಿಟ್ಹಾಕೋಣ,‘ ಎಂದು ಟ್ವೀಟ್‌ ಮಾಡಿದ್ದಾರೆ.

ತೇಜಸ್ವಿನಿ ಅವರು ಪತಿಗೆ ರಾಜಕೀಯವಾಗಿ ನೆರವಾಗುತ್ತಲೇ, ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದವರು. ಅದಮ್ಯ ಚೇತನ ಎಂಬ ಸಂಸ್ಥೆಯ ಮೂಲಕ ಅವರು ಪರಿಸರ ಸಂರಕ್ಷಣೆಯಲ್ಲೂ ನಿರತರಾಗಿದ್ದಾರೆ. ‌

ಇನ್ನು ತೇಜಸ್ವಿನಿ ಅವರ ಟ್ವೀಟ್‌ ಬಗ್ಗೆ ಹಲವು ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅವರ ಪರಿಸರ ಕಾಳಜಿಯನ್ನು ಹಲವರು ಪ್ರಶಂಸಿಸಿದ್ದಾರೆ,ಆದರೆ, ನಿಖಿಲ್‌ ಅವರನ್ನು ಉದಾಹರಣೆಯಾಗಿ ನೀಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೇರೆ ಪಕ್ಷದವರನ್ನುಏಕವಚನದಲ್ಲಿ ಸಂಭೋದಿಸುವುದು ತಪ್ಪು ಎಂದು ಕೆಲ ಮಂದಿ ಹೇಳಿದ್ದರೆ, ಚಿಕ್ಕವರನ್ನು ಏಕವಚನದಲ್ಲಿ ಮಾತನಾಡಿಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಕೆಲವರು ಹೇಳಿದ್ದಾರೆ.

ಇನ್ನೂ ಕೆಲವರು ನಿಖಿಲ್‌ ಅವರ ಬಗ್ಗೆ ಗೇಲಿ ಮಾಡಿದ್ದಾರೆ. ಟಿಕೆಟ್‌ ಸಿಗದಕ್ಕೆ ತೇಜಸ್ವಿನಿ ಅವರು ಅನ್ಯ ಪಕ್ಷದವರನ್ನು ಹೊಗಳುವ ಮೂಲಕ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT