ಭಾನುವಾರ, ಮೇ 24, 2020
27 °C

₹5 ಸಾವಿರ ನೆರವಿಗೆ ಚಾಲಕರು ಏನು ಮಾಡಬೇಕು? ಇಲ್ಲಿದೆ ಮಾಹಿತಿ  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ₹5 ಸಾವಿರ ನೆರವು ನೀಡುವುದಾಗಿ ಘೋಷಿಸಿದ್ದು, ಈ ಸಂಬಂಧ ಅರ್ಜಿಯನ್ನು 'ಸೇವಾ ಸಿಂಧು' ಪೋರ್ಟಲ್ ನಲ್ಲಿ ಶನಿವಾರ ಅಪ್ ಲೋಡ್ ಮಾಡಿದೆ. 

ಚಾಲಕರು ತಮ್ಮ ಆಧಾರ್ ಸಂಖ್ಯೆ, ವಿಳಾಸ, ಡಿಎಲ್‌ ಸಂಖ್ಯೆ, ಬ್ಯಾಡ್ಜ್ ಸಂಖ್ಯೆ, ವಾಹನದ ಫಿಟ್ ನೆಸ್ ಸರ್ಟಿಫಿಕೇಟ್, ಚಾಲಕರ ವರ್ಗ, ವಾಹನದ ವರ್ಗ, ಬ್ಯಾಂಕ್ ಖಾತೆ ಸಂಖ್ಯೆ  ಮತ್ತಿತರ ವಿವರವನ್ನು ಇಂಗ್ಲಿಷ್ ನಲ್ಲಿಯೇ ಭರ್ತಿ ಮಾಡಬೇಕು. ಚಾಲನಾ ಪರವಾನಗಿಯಲ್ಲಿರುವಂತೆಯೇ ಚಾಲಕರು ತಮ್ಮ ಹೆಸರನ್ನು ಅರ್ಜಿಯಲ್ಲಿ ನಮೂದಿಸಬೇಕು. 

ಎಲ್ಲ ವಿವರ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಅರ್ಹರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಹೇಳಿದೆ.

ಹೆಚ್ಚಿನ ಮಾಹಿತಿಗೆ  080-22236698/ 9449863214 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು. 

ಅರ್ಜಿಗಾಗಿ https://serviceonline.gov.in/karnataka/directApply.do?serviceId=1088 ಈ ಲಿಂಕ್ ಬಳಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು