ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಆಕ್ಸಿಡೆಂಟಲ್‌ ಸಿಎಂ’ ಸಿನಿಮಾ ಆದರೆ ಎಚ್‌ಡಿಕೆ ಪಾತ್ರ ಯಾರಿಗೆ?; ಬಿಜೆಪಿ ಟ್ವೀಟ್‌

Last Updated 29 ಡಿಸೆಂಬರ್ 2018, 13:27 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಜೀವನಾಧಾರಿತ ಸಿನಿಮಾ ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟ‌ರ್‌ ಟ್ರೇಲರ್‌ ಬಿಡುಗಡೆಯಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಎದ್ದಿರುವ ವಾದ–ವಿವಾದಗಳು ತಣ್ಣಗಾಗುತ್ತಿದ್ದಂತೆ ಕರ್ನಾಟಕ ರಾಜಕೀಯ ರಂಗದಲ್ಲಿ ಹೊಸದೊಂದು ’ಆಕ್ಸಿಡೆಂಟ್‌’ ಚರ್ಚೆಗೆ ಗ್ರಾಸವಾಗಿದೆ. ರಾಜಕಾರಣದ ಸಾಂದರ್ಭಿಕ ಶಿಶು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿ ಟಾರ್ಗೆಟ್‌ ಮಾಡಿದೆ.

ಆಕ್ಸಿಡೆಂಟಲ್‌ ಸಿಎಂ’ ಎಂಬ ಸಿನಿಮಾ ಇದ್ದಿದ್ದರೆ, ಅದರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರ ಪಾತ್ರವನ್ನು ಯಾರು ಮಾಡುತ್ತಿದ್ದರು? ಎಂದು ಬಿಜೆಪಿ ಕರ್ನಾಟಕ ಘಟಕ ತನ್ನ ಟ್ವಿಟರ್‌ ಖಾತೆಯಲ್ಲಿ ಕುಮಾರಸ್ವಾಮಿ ಅವರ ಕಾಲೆಳೆಯುವ ಪ್ರಯತ್ನ ಮಾಡಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 37 ಸ್ಥಾನಗಳನ್ನು ಪಡೆದ ಜೆಡಿಎಸ್‌ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು, 80 ಸ್ಥಾನಗಳನ್ನು ಗಳಿಸಿದ ಕಾಂಗ್ರೆಸ್‌ ಬಿಜೆಪಿಯನ್ನು ಹಿಂದಿಟ್ಟು ಜೆಡಿಎಸ್‌ ಜತೆಗೆ ಕೈಜೋಡಿಸಿದ್ದು, ಇತರೆ ವಿಜೇತರ ಸಹಕಾರ ಪಡೆದು 120 ಸ್ಥಾನಗಳ ಬೆಂಬಲದೊಂದಿಗೆಸರ್ಕಾರ ರಚನೆಯಾಗಿದ್ದು, 104 ಸ್ಥಾನಗಳನ್ನು ಪಡೆದು 113 ಬೆಂಬಲ ಸಂಖ್ಯೆಯನ್ನು ಮುಟ್ಟಲಾರದೆ ಬಿಜೆಪಿ ತಿಣುಕಾಡಿದ್ದು,ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬಂದಿದ್ದು, ಪದೇ ಪದೇ ಕಣ್ಣೀರು ಹಾಕುತ್ತ ’ನಾನು ಸಾಂದರ್ಭಿಕ ಶಿಶು, ನನ್ನ ಕಷ್ಟ ಹೇಳಿಕೊಳ್ಳಲಾರೆ’ ಎಂದೆಲ್ಲ ಗೋಗರೆಯುತ್ತಿದುದು,...ಈ ಎಲ್ಲದರ ಹಿನ್ನೆಲೆಯಲ್ಲಿ ಬಿಜೆಪಿ ಪ್ರಸ್ತಾಪಿಸಿರುವ ’ಆಕ್ಸಿಡೆಂಟಲ್‌ ಸಿಎಂ’ ಶೀರ್ಷಿಕೆ ಟ್ವೀಟಿಗರ ಗಮನ ಸೆಳೆದಿದೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT