ಶನಿವಾರ, ಏಪ್ರಿಲ್ 4, 2020
19 °C

ಕಲಬುರ್ಗಿ: ಮಾತೆ ಮಾಣಿಕೇಶ್ವರಿ ಅಮ್ಮ ಲಿಂಗೈಕ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ (87) ಶನಿವಾರ ರಾತ್ರಿ ನಿಧನರಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ, ಯಾನಾಗುಂದಿ ಆಶ್ರಮದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.

ಪ್ರತಿ ವರ್ಷ ಶಿವರಾತ್ರಿಯ ದಿನ ಗುಹೆಯಿಂದ ಹೊರಬಂದು, ಭಕ್ತರಿಗೆ ದರ್ಶನ ನೀಡುತ್ತಿದ್ದರು. ಅವರ ದರ್ಶನ ಪಡೆಯಲು ರಾಜ್ಯ ಮತ್ತು ಹೊರರಾಜ್ಯಗಳ ಅಪಾರ ಸಂಖ್ಯೆಯ ಭಕ್ತರು ಸೇರುತ್ತಿದ್ದರು. ಈ ಶಿವರಾತ್ರಿಯ ದಿನ ಅವರನ್ನು ಸ್ಟೇಚರ್‌ನಲ್ಲಿ ಕರೆತಂದು ಭಕ್ತರಿಗೆ ಅವರ ಪಾದಗಳ ದರ್ಶನ ಕೊಡಿಸಲಾಗಿತ್ತು. 

‘ಮಾ.8ರಂದು ಭಾನುವಾರ ಆಶ್ರಮದಲ್ಲಿಯೇ ಅವರ ಪಾರ್ಥಿವ ಶರೀರದ ದರ್ಶನ ಮಾಡಲು ಭಕ್ತರಿಗೆ ಅವಕಾಶ ನೀಡಲಾಗುವುದು. ದೇಶದ ಬೇರೆ ಬೇರೆ ಭಾಗದಿಂದ ಭಕ್ತರು ಬರುವ ಸಾಧ್ಯತೆ ಇರುವುದರಿಂದ 2–3 ದಿನ ಬಿಟ್ಟು ಅಂತ್ಯಸಂಸ್ಕಾರ ನೆರವೇರಿಸುವ ಬಗ್ಗೆ ನಂತರ ನಿರ್ಧರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಬಿ.ಶರತ್‌ ತಿಳಿಸಿದರು.

ಇದನ್ನೂ ಓದಿ... ಮಾತೆ ಮಾಣಿಕೇಶ್ವರಿ ಎಂಬ 'ಶಕ್ತಿ'

ವೀರಧರ್ಮಜ ಮಾತಾ ಮಾಣಿಕೇಶ್ವರಿ ಅಮ್ಮನವರ ಅಂತಿಮ ದರ್ಶನಕ್ಕೆ ಸೂರ್ಯನಂದಿ ಬೆಟ್ಟದಲ್ಲಿ ಸಿದ್ಧತೆ ಆರಂಭವಾಗಿದ್ದು, ಆಶ್ರಮದಲ್ಲಿ ಆಖಂಡ ಭಜನೆ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ತೆಲಂಗಾಣ ಹಾಗೂ ಕರ್ನಾಟಕ ಪೊಲೀಸ್ ಅಧಿಕಾರಿಗಳಿಂದ ಬೆಟ್ಟಕ್ಕೆ ಭೇಟಿ ನೀಡಿ ಬಂದೋಬಸ್ತ್ ಕುರಿತು ಚರ್ಚೆ ನಡೆಸಿದ್ದಾರೆ.  

ಮಾತೆಯವರು ಇನ್ನಿಲ್ಲದ ಸುದ್ದಿ ತಿಳಿದು ಗುರಮಠಕಲ್ ತಾಲೂಕಿನ ಗ್ರಾಮೀಣ ಭಾಗದಿಂದ ಜನತೆ ಬೆಟ್ಟಕ್ಕೆ ದೌಡಾಯಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು