ಶುಕ್ರವಾರ, ಫೆಬ್ರವರಿ 28, 2020
19 °C

ಝೀರೊ ಟ್ರಾಫಿಕ್: ನಾಲ್ಕೂವರೆ ಗಂಟೇಲಿ ಮಂಗಳೂರಿಂದ ಬೆಂಗಳೂರಿಗೆ ಬಂತು ಆಂಬುಲೆನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 40 ದಿನದ ಮಗುವನ್ನು ಮಂಗಳೂ
ರಿನಿಂದ ಬೆಂಗಳೂರಿಗೆ 4.30 ಗಂಟೆಯಲ್ಲಿಯೇ ಝೀರೊ ಟ್ರಾಫಿಕ್ ವ್ಯವಸ್ಥೆ ಮೂಲಕ ಕರೆದೊಯ್ಯಲಾಗಿದೆ. ಮಂಗಳೂರಿನ ಫಾದರ್‌ ಮುಲ್ಲರ್ ಆಸ್ಪತ್ರೆಯಿಂದ ಗುರುವಾರ ಮಧ್ಯಾಹ್ನ 12:05ಕ್ಕೆ ಹೊರಟ ಆಂಬುಲೆನ್ಸ್ ಸಂಜೆ 4.35ಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಿದೆ.

ಬೆಳ್ತಂಗಡಿಯ ಬಳಂಜದ ಮುಹಮ್ಮದ್ ಹನೀಫ್‌ ಆಂಬುಲೆನ್ಸ್ ಚಲಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದಾರಿ ಮಾಡಿಕೊಟ್ಟ ಸಾರ್ವಜನಿಕರಿಗೆ ಕೃತಜ್ಞತೆ ಹೇಳುತ್ತೇನೆ. ನೆಲಮಂಗಲದ ಬಳಿಕ ಟ್ರಾಫಿಕ್ ಉಂಟಾಗಿ ಸ್ವಲ್ಪ ಸಮಯ ತೆಗೆದುಕೊಂಡಿತು’ ಎಂದು ತಿಳಿಸಿದರು.

‘9 ತಿಂಗಳ ಹಿಂದೆ ಬೆಂಗಳೂರಿನಿಂದ ಕಲ್ಲಿಕೋಟೆಗೆ ಕೇವಲ 4 ಗಂಟೆ 10 ನಿಮಿಷದಲ್ಲಿ 380 ಕಿ.ಮೀ. ಕ್ರಮಿ
ಸಿದ್ದೆ. ಆಗಲೂ ‘ಝೀರೋ ಟ್ರಾಫಿಕ್’ ಪ್ರಯೋಜನಕ್ಕೆ ಬಂದಿತ್ತು. ಬುಧವಾರ ಸಂಜೆ 6 ಗಂಟೆಗೆ ನನಗೆ ಮಾಹಿತಿ ನೀಡಿದ್ದರು. ರಾತ್ರಿ 12 ಗಂಟೆಗೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಮಂಗಳೂರು ತಲುಪಿದ್ದೆ. ಇಲ್ಲಿಂದ ಮಧ್ಯಾಹ್ನ12.05ಕ್ಕೆ ಮಗು, ತಂದೆ, ತಾಯಿ ಮತ್ತು ಸಂಬಂಧಿಕರನ್ನು ಕರೆದುಕೊಂಡು ಹೋಗಿದ್ದೆವು. ಆಮ್ಲಜನಕ (ಆಕ್ಸಿಜನ್) ಬದಲಾಯಿಸಲು ದಾರಿ ಮಧ್ಯೆ 10 ನಿಮಿಷ ನಿಲ್ಲಿಸಬೇಕಾಗಿ ಬಂತು’ ಎಂದರು.

‘ತುರ್ತಾಗಿ ಚಿಕಿತ್ಸೆಗೆ ಮಗುವನ್ನು ಕರೆದೊಯ್ಯಬೇಕು ಎಂದು ವೈದ್ಯರು ಹೇಳಿದ್ದರು. ಆಗ ನಾವು, ಬಳಂಜದ ಹನೀಫ್ ಅವರನ್ನು ಸಂಪರ್ಕಿಸಿದೆವು. ಎಲ್ಲರೂ ಸಹಕರಿಸಿದರು’ ಎಂದು ಮಗುವಿನ ಹತ್ತಿರದ ಸಂಬಂಧಿ ಸಲೀಂ ಕೃತಜ್ಞತೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು