‘ಶಬರಿಮಲೆ ದೇಗುಲಕ್ಕೆ ಮಹಿಳೆಯರು ಹೋಗಬಹುದು’ ಸುಪ್ರೀಂಕೋರ್ಟ್

7

‘ಶಬರಿಮಲೆ ದೇಗುಲಕ್ಕೆ ಮಹಿಳೆಯರು ಹೋಗಬಹುದು’ ಸುಪ್ರೀಂಕೋರ್ಟ್

Published:
Updated:

ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಹೋಗಬಹುದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ನೀಡಿದ ತೀರ್ಪಿನಲ್ಲಿ ತಿಳಿಸಿದೆ.

ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದಾಗಿ ‘ಮಹಿಳೆಯರು ದೇಗುಲ ಪ್ರವೇಶಿಸುವಂತಿಲ್ಲ’ ಎನ್ನುವ ನೂರಾರು ವರ್ಷಗಳ ನಿರ್ಬಂಧ ತೆರವಾದಂತೆ ಆಗಿದೆ. ಶಬರಿಮಲೆಯ ಅಯ್ಯಪ್ಪ ದೇವರು ಬ್ರಹ್ಮಚಾರಿ ಎನ್ನುವ ಕಾರಣಕ್ಕೆ ದೇಗುಲಕ್ಕೆ ಋತುಸ್ರಾವದ ವಯೋಮಾನದ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

‘ನಮ್ಮ ಬದುಕಿನ ಘನತೆಯನ್ನು ಧರ್ಮ ಎತ್ತಿಹಿಡಿಯುತ್ತದೆ. ಅಯ್ಯಪ್ಪ ದೇವರು ಪ್ರತ್ಯೇಕ ಅಲ್ಲ’ ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟರು.

ಮುಖ್ಯನ್ಯಾಯಮೂರ್ತಿ ದೀಪಕ್‌ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ನ್ಯಾಯಪೀಠ ಈ ತೀರ್ಪು ನೀಡಿದೆ. ನ್ಯಾಯಾಧೀಶ ಎ.ಎಂ.ಖಾನ್‌ವಿಲ್ಕರ್ ಮತ್ತು ತಮ್ಮ ಪರವಾಗಿ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ತೀರ್ಪು ಓದಿದರು. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಆರ್‌.ನಾರಿಮನ್ ಸಹಮತ ವ್ಯಕ್ತಪಡಿಸಿದರು. ಇಂದೂ ಮಲ್ಹೋತ್ರಾ ಈ ತೀರ್ಪನ್ನು ಒಪ್ಪದೆ ಭಿನ್ನಮತ ದಾಖಲಿಸಿದರು.

ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಐವರು ನ್ಯಾಯಮೂರ್ತಿಗಳು ಒಟ್ಟು ನಾಲ್ಕು ಪ್ರತ್ಯೇಕ ತೀರ್ಪು ಓದಿದರು. ತೀರ್ಪಿನ ಮುಖ್ಯ ಆಂಶಗಳು ಇವು...

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದ ಮೊದಲ ತೀರ್ಪು ಓದಿದ್ದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ.

‘ನೈತಿಕತೆಯನ್ನು ಪ್ರತಿಬಂಧಿಸುವ ನಿರ್ಧಾರಗಳಿಗೆ ಕಾರಣ ಏನಿರಬಹುದು ಎಂದು ಮಾನವ ಕುಲ ಪ್ರಾಚೀನ ಕಾಲದಿಂದಲೂ ಹುಡುಕಾಟ ನಡೆಸುತ್ತಲೇ ಇದೆ. ಜೀವನನಾಟಕದಲ್ಲಿ ಪುರುಷನ ಪ್ರಾಧಾನ್ಯತೆ ಎದ್ದು ಕಾಣುತ್ತದೆ. ಆದರೆ ಮಹಿಳೆಗೆ ಮಾತ್ರ ಅಸ್ತಿತ್ವ ಕಂಡುಕೊಳ್ಳುವುದೇ ಸವಾಲಾಗಿದೆ (In the theatre of life, man has put autograph and there is no space for woman to even put her signature).

‘ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಗುರುತರ ಹೊಣೆಗಾರಿಕೆಯನ್ನು ಕಾನೂನು ಮತ್ತು ಸಮಾಜ ನಿರ್ವಹಿಸುತ್ತಿದೆ. ದೇವರೊಂದಿಗೆ ಹೊಂದುವ ಯಾವುದೇ ಸಂಬಂಧ ಆಧ್ಯಾತ್ಮಿಕವಾಗಿರುತ್ತದೆ. ಮಹಿಳೆಯನ್ನು ಆಕೆಯ ಲಿಂಗ ಮತ್ತು ಸಹಜವಾಗಿರುವ ಜೈವಿಕ ಕಾರಣಗಳಿಗಾಗಿ ಪ್ರತ್ಯೇಕಿಸುವುದನ್ನು ಒಪ್ಪಲು ಸಾಧ್ಯವಿಲ್ಲ.

‘ಧರ್ಮ ಎನ್ನುವುದು ನಮ್ಮ ಘನತೆಯಿಂದ ನಮ್ಮ ಅಸ್ತಿತ್ವ ಕಂಡುಕೊಳ್ಳಲು ಇರುವ ಜೀವನಪದ್ಧತಿ. ಆದರೆ ಪೂರ್ವಗ್ರಹಪೀಡಿತ ಸಂಪ್ರದಾಯಗಳು ಸಾಮರಸ್ಯಕ್ಕೆ ಧಕ್ಕೆ ತಂದಿವೆ.

‘ಈವರೆಗಿನ ವಿಚಾರಣೆ ಮತ್ತು ದಾಖಲೆಗಳ ಅವಲೋಕನದ ನಂತರ ಅಯ್ಯಪ್ಪ ದೇವರ ಅನುಯಾಯಿಗಳನ್ನು ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ಪಡೆದುಕೊಂಡಿಲ್ಲ, ಅವರೆಲ್ಲರೂ ಹಿಂದೂಗಳು ಎನ್ನುವುದು ಮನವರಿಕೆಯಾಗಿದೆ.

‘ಲಿಂಗತಾರತಮ್ಯ ಅಥವಾ ದೈಹಿಕ ಚಹರೆಯನ್ನು ಆಧರಿಸಿದ ತಾರತಮ್ಯಕ್ಕೂ ಸಂವಿಧಾನದ 25ನೇ ಪರಿಚ್ಛೇದಕ್ಕೂ (ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯ) ಯಾವುದೇ ಸಂಬಂಧವಿಲ್ಲ. ಅಯ್ಯಪ್ಪಸ್ವಾಮಿ ದೇಗುಲದ ನಿಯಮವು ಮಹಿಳೆಗೆ ತನ್ನಿಚ್ಛೆಯ ಆರಾಧನೆ ಮತ್ತು ಧಾರ್ಮಿಕ ಆಚರಣೆಗಳನ್ನು ಮಾಡುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಲಿಂಗತಾರತಮ್ಯವನ್ನೇ ಮುಖ್ಯವಾಗಿರಿಸಿಕೊಂಡು ಮಹಿಳೆಗೆ ದೇಗುಲ ಪ್ರವೇಶದ ಹಕ್ಕು ನಿರಾಕರಿಸುವುದು ಸಂವಿಧಾನದ ಆಶಯಗಳ ಉಲ್ಲಂಘನೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಇರುವ ನಿರ್ಬಂಧವನ್ನು ತೆರವುಗೊಳಿಸುತ್ತಿದ್ದೇವೆ’.

––

ಸುಪ್ರೀಂಕೋರ್ಟ್‌ ತೀರ್ಪು ನಿರಾಸೆ ಮೂಡಿಸಿದೆ. ಆದರೆ, ಕೋರ್ಟ್‌ ತೀರ್ಮಾನವನ್ನು ಒಪ್ಪಲೇಬೇಕಲ್ಲವೇ

– ತಂತ್ರಿ ರಾಜೀವರು ಕಂದರಾರ್, ಶಬರಿಮಲೆ ಮುಖ್ಯ ಅರ್ಚಕ

ಕೇರಳ ಸರ್ಕಾರ ಈ ತೀರ್ಪಿಗೆ ಶ್ಲಾಘನೆ ವ್ಯಕ್ತಪಡಿಸಿದೆ. ಇದು ಐತಿಹಾಸಿಕ ತೀರ್ಪು ಅಷ್ಟೇ ಅಲ್ಲ, ಇದೊಂದು ಕಾಂತ್ರಿಕಾರಿಕ ತೀರ್ಪಾಗಿದೆ. ಇದನ್ನು ಜಾರಿಗೊಳಿಸುತ್ತೇವೆ

– ಜಿ.ಸುಧಾಕರನ್, ಕೇರಳ ಲೋಕೋಪಯೋಗಿ ಸಚಿವ

–––

ಸುಪ್ರೀಂಕೋರ್ಟ್‌ನಲ್ಲಿ ಶಬರಿಮಲೆ ಪ್ರಕರಣ: ನೀವು ಓದಲೇಬೇಕಾದ 11 ಸುದ್ದಿಗಳು

1) ಪರಂಪರೆ ಮುರಿಯಲು ಸಾಧ್ಯವಿಲ್ಲ: ದೇವಸ್ವಂ ಮಂಡಳಿ

2) ಮಹಿಳೆಯರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಅಲ್ಲವೇ: ಸುಪ್ರಿಂಕೋರ್ಟ್ ಪ್ರಶ್ನೆ

3) ಮಹಿಳೆಯರಿಗೆ ಶಬರಿಮಲೆ ಪ್ರವೇಶ ಸಾಧ್ಯವಿಲ್ಲ: ದೇವಸ್ವಂ ಮಂಡಳಿ

4) ಮಹಿಳೆಯರಿಗೂ ಶಬರಿಮಲೆ ದೇಗುಲ ಪ್ರವೇಶಕ್ಕೆ ಅವಕಾಶ: ಕೇರಳ ಸರ್ಕಾರ

5) ಯಾರಿಗೂ ದೇಗುಲ ಪ್ರವೇಶ ನಿರಾಕರಿಸುವಂತಿಲ್ಲ ಎಂದ ನ್ಯಾಯಪೀಠ

6) ಶಬರಿಮಲೆ ಪ್ರವೇಶ ನಿಷೇಧಕ್ಕೆ ವ್ರತದ ನೆಪ

7) ಮಹಿಳೆಯರಿಗೆ ಪ್ರವೇಶ ನೀಡಿದರೆ ಶಬರಿಮಲೆ 'ಸೆಕ್ಸ್ ಟೂರಿಸಂ' ಕೇಂದ್ರ ಆಗಿಬಿಡುತ್ತದೆ: ದೇವಸ್ವಂ ಮಂಡಳಿ ಮುಖ್ಯಸ್ಥ ಪ್ರಾಯರ್ ಗೋಪಾಲಕೃಷ್ಣನ್

8) ನಿಷೇಧಕ್ಕೆ ಪರಂಪರೆ ಸಮರ್ಥನೆಯಲ್ಲ: ಸುಪ್ರೀಂಕೋರ್ಟ್

9) ಕೇರಳ ಪ್ರವಾಹ: ಶಬರಿಮಲೆ ಯಾತ್ರೆಗೆ ಮೂಲಸೌಕರ್ಯ ಕೊರತೆ

10) ಶಬರಿಮಲೆ ದೇಗುಲ ಪ್ರವೇಶಿಸಿದ ಮಹಿಳೆಯರು: ತನಿಖೆಗೆ ಆದೇಶ

11) ಅಯ್ಯಪ್ಪ ಸ್ವಾಮಿ ಮಾಲೆ ಹಾಕುವುದು ಎಂದರೇನು?

ಬರಹ ಇಷ್ಟವಾಯಿತೆ?

 • 29

  Happy
 • 2

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !