ಭಾನುವಾರ, ಆಗಸ್ಟ್ 1, 2021
27 °C

ಬಾಗ್ದಾದ್‌: ಅಮೆರಿಕದ ರಾಯಭಾರ ಕಚೇರಿಯ ವಲಯದಲ್ಲಿ ಕ್ಷಿಪಣಿ ದಾಳಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಬಾಗ್ದಾದ್‌: ಬಾಗ್ದಾದ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಇರುವ ಹಸಿರು ವಲಯದಲ್ಲಿ ಕ್ಷಿಪಣಿ (ರಾಕೆಟ್‌)‌ ದಾಳಿ ನಡೆದಿದೆ. ಈ ಕ್ಷಿಪಣಿ‌ ಮನೆಯೊಂದಕ್ಕೆ ಬಡಿದು, ಮಗು ಗಾಯಗೊಂಡಿದೆ ಎಂದು ಇರಾಕ್‌ನ ಸೇನೆ ಭಾನುವಾರ ತಿಳಿಸಿದೆ. 

ರಾಯಭಾರ ಕಚೇರಿಯಲ್ಲಿ ಈಚೆಗೆ ಅಳವಡಿಸಲಾದ ಸಿ–ರ್‍ಯಾಮ್‌ ವಾಯುರಕ್ಷಣಾ ವ್ಯವಸ್ಥೆಯು ಈ ‌ದಾಳಿಯನ್ನು ತಡೆದಿರಬಹುದು. ಇತ್ತೀಚಿನ ಕ್ಷಿಪಣಿ ದಾಳಿಗಳು ಅಮೆರಿಕ ರಾಯಭಾರ ಕಚೇರಿಗೆ ಹತ್ತಿರವಾಗಿದ್ದು, ಅಮೆರಿಕ ಸೈನಿಕರನ್ನು ಗುರಿಯಾಗಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಅಲಿ ಆಲ್‌ ಸಲೇಹ್‌ ಪ್ರದೇಶದಿಂದ ಈ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದ್ದು, ಸ್ಥಳೀಯ ಸುದ್ದಿವಾಹಿನಿಯ ಕಚೇರಿ ಪಕ್ಕದಲ್ಲಿದ್ದ ಮನೆಗೆ ಬಡಿದಿದೆ. ಇದರಿಂದಾಗಿ ಮನೆಗೆ ಹಾನಿಯಾಗಿದ್ದು, ಮನೆಯಲ್ಲಿದ್ದ ಮಗುವಿಗೆ ಪೆಟ್ಟಾಗಿದೆ. 

ಅಮೆರಿಕ ಸೇನೆಯ ತರಬೇತಿ ನೆಲೆಯಾದ ಉತ್ತರ ಬಾಗ್ದಾದ್‌ನ ಉಮ್‌ ಅಲ್‌ ಅಜಂ ಪ್ರದೇಶದ ಮೇಲೆಯೂ ಸಂಭವಿಸಲಿದ್ದ  ಕ್ಷಿಪಣಿ ದಾಳಿಯನ್ನು ತಡೆಯಲಾಗಿದೆ ಎಂದು ಇರಾನಿನ ಭದ್ರತಾ ಪಡೆಗಳು ಹೇಳಿಕೊಂಡಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು