ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ: ಮುಂಗುಸಿ ಮಾಂಸ ತಿನ್ನದಂತೆ ಎಚ್ಚರಿಕೆ

Last Updated 6 ಜುಲೈ 2020, 5:38 IST
ಅಕ್ಷರ ಗಾತ್ರ

ಬೀಜಿಂಗ್: ಕೊರೊನಾ ಸೋಂಕಿನಿಂದ ತತ್ತರಿಸಿದ ಚೀನಾದಲ್ಲಿ ಈಗ ಬಬೂನಿಕ್ ಪ್ಲೇಗ್ ಎಂಬ ರೋಗ ಅಲ್ಲಿನ ಜನರನ್ನು ಕಾಡಲು ಆರಂಭಿಸಿದೆ.

ಈ ರೋಗವು ಚೀನಾ ವ್ಯಾಪ್ತಿಯಲ್ಲಿರುವಮಂಗೋಲಿಯಾದ ಬಯನ್ನೂರ್ ಎಂಬಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯ ಆಡಳಿತ ಈಗಾಗಲೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಶಂಕಿತ ಬಬೂನಿಕ್ ಪ್ಲೇಗ್ ಶನಿವಾರ ವರದಿಯಾಗಿದ್ದು, ಸ್ಥಳೀಯ ಆಡಳಿತ 2020ರ ಅಂತ್ಯದವರೆಗೂ ಜನರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದೆ.

ಈ ಸಂಬಂಧ ಬಯನ್ನೂರ್‌ನಲ್ಲಿಪ್ಲೇಗ್ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಬಗ್ಗೆ ಮೂರನೇ ಹಂತದ ಎಚ್ಚರಿಕೆಯನ್ನು ಘೋಷಿಸಿದೆ ಎಂದು ಅಲ್ಲಿನ ಸ್ಥಳೀಯ ಜಾಲತಾಣಗಳು ವರದಿ ಮಾಡಿವೆ.

ಈ ರೋಗವು ಮಾನವರಿಂದ ಮಾನವರಿಗೆ ಹರಡುವಂತಹ ಅಪಾಯ ಕಾಣಿಸಿಕೊಂಡಿದ್ದು,ಅಸ್ವಾಭಾವಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಕೂಡಲೆ ವರದಿ ಮಾಡಬೇಕು. ಎಚ್ಚರಿಕೆಯಿಂದ ಇದ್ದು, ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಜುಲೈ 1 ರಂದು ಪಶ್ಚಿಮ ಮಂಗೋಲಿಯಾ ಪ್ರಾಂತ್ಯದಲ್ಲಿ ವರದಿಯಾದ ಎರಡು ಬುಬೊನಿಕ್ ಪ್ಲೇಗ್ ಪ್ರಕರಣಗಳು ಪರೀಕ್ಷೆಯಿಂದ ದೃಢ ಪಟ್ಟಿವೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

27 ವರ್ಷದ ವ್ಯಕ್ತಿ ಹಾಗೂ 17 ವರ್ಷದ ಆತನ ಸೋದರ ಇಬ್ಬರಲ್ಲಿಯೂ ಪ್ಲೇಗ್ ಕಾಣಿಸಿಕೊಂಡಿದ್ದು, ಇಬ್ಬರನ್ನೂ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಸೋದರರು ಮುಂಗುಸಿಯ ಹಸಿ ಮಾಂಸವನ್ನು ಸೇವಿಸಿದ್ದರು. ಇದರಿಂದಾಗಿ ಈ ರೋಗ ಕಾಣಿಸಿಕೊಂಡಿರಬಹುದು. ಆದ್ದರಿಂದ ಯಾರೂ ಮುಂಗುಸಿಯ ಮಾಂಸವನ್ನು ತಿನ್ನಬಾರದೆಂದು ಎಚ್ಚರಿಕೆ ನೀಡಿರುವುದಾಗಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ಸೋದರರ ಸಂಪರ್ಕದಲ್ಲಿದ್ದ 146 ಮಂದಿಯನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಬೂನಿಕ್ ಪ್ಲೇಗ್
ಬಬೂನಿಕ್ ಪ್ಲೇಗ್ ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದೆ. ಇದು ಮುಂಗುಸಿಯಂತಹ ಪ್ರಾಣಿಗಳ ಮೈಮೇಲೆ ಉತ್ಪತ್ಪಿಯಾಗುವ ಚಿಗಟೆಗಳಿಂದ ಹರಡುತ್ತದೆ. ಬಬೂನಿಕ್ ಪ್ಲೇಗ್ ತಗುಲಿದ 24 ಗಂಟೆಗಳಲ್ಲಿ ಯಾವುದೇ ಚಿಕಿತ್ಸೆ ದೊರೆಯದಿದ್ದರೆ ರೋಗಿಯುಸಾವನ್ನಪ್ಪಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಕಳೆದ ಸಾಲಿನಲ್ಲಿ ಮುಂಗುಸಿಯ ಮಾಂಸವನ್ನು ಸೇವಿಸಿದ ನಂತರ ಗಂಡ ಹೆಂಡತಿ ಇಬ್ಬರು ಮೃತಪಟ್ಟಿರುವ ಘಟನೆ ಮಂಗೋಲಿಯಾ ಪ್ರಾಂತ್ಯದಲ್ಲಿ ನಡೆದಿದೆ. ಹಂದಿಗಳಿಂದಲೂ ಸಾಂಕ್ರಾಮಿಕ ರೋಗ ಹರಡಬಹುದು ಎಂದು ಚೀನಾದ ಸಾಂಕ್ರಾಮಿಕ ರೋಗಗಳ ಕುರಿತು ಸಂಶೋಧನೆ ನಡೆಸಿರುವ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಹಂದಿಗಳಲ್ಲಿ ಕಾಣಿಸಿಕೊಳ್ಳುವ G4 ವೈರಸ್ ತುಂಬಾ ಅಪಾಯಕಾರಿಯಾಗಿದ್ದು, ಇದು ಮಾನವರಿಂದ ಮಾನವರಿಗೆ ಹರಡುವ ಸಂಭವವಿದೆ ಎಂದು ಚೀನಾ ಕೃಷಿ ವಿಶ್ವವಿದ್ಯಾಲಯ, ಚೀನಾದ ಸಾಂಕ್ರಾಮಿಕ ರೋಗ ನಿರೋದಕ ಹಾಗೂ ನಿಯಂತ್ರಣ ಕೇಂದ್ರದ ವಿಜ್ಞಾನಗಳು ತಿಳಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ 'ಗ್ಲೋಬಲ್ ಟೈಮ್ಸ್‌'ವರದಿ ಮಾಡಿದೆ.

G4 ವೈರಸ್ ಸಂಬಂಧಿಸಿದಂತೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆ ಇದೆ. ಅಲ್ಲದೆ, ವಿಶ್ವಕ್ಕೂ ಏಕಾಏಕಿ ಸ್ಫೋಟಿಸಿ ಕಂಟಕವಾಗಬಹುದು ಎಂದು ಬಿಬಿಸಿ ಹೇಳಿದೆ. ಅಲ್ಲದೆ, ಹಂದಿಗಳಲ್ಲಿ ಕಾಣಿಸಿಕೊಳ್ಳುವ ಜಿ 4 ಇಎ ಎಚ್ 1 ಎನ್ 1 ವೈರಸ್‌ಗಳನ್ನು ನಿಯಂತ್ರಿಸುವುದು ಮತ್ತು ಮಾನವ ಜನಸಂಖ್ಯೆಯಲ್ಲಿ ನಿಕಟ ಮೇಲ್ವಿಚಾರಣೆ ಮಾಡುವುದು ಈಗ ಅತ್ಯಗತ್ಯವಾಗಿದೆ. ವಿಶೇಷವಾಗಿ ಹಂದಿ ಉದ್ಯಮಗಳಲ್ಲಿ ಇದು ನಡೆಯಬೇಕಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಬೀಜಿಂಗ್‌ನಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕೇವಲ ಬೆರಳೆಣಿಕೆಯಷ್ಟು ಮಾತ್ರ ವರದಿಯಾಗಿದೆ ಎಂದು ಸ್ಥಳೀಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಆಹಾರ ಪದಾರ್ಥ ಮಾರುಕಟ್ಟೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT