ಸೋಮವಾರ, ಜೂನ್ 21, 2021
29 °C

Covid-19 World Update | 1.77 ಕೋಟಿ ಕೊರೊನಾ ಸೋಂಕಿತರು, 6.82 ಲಕ್ಷ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಜಗತ್ತಿನಾದ್ಯಂತ 1,77,54,183 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 6,82,885 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ 1,11,58,280 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವರ್ಡೊಮೀಟರ್‌ ಮಾಹಿತಿ ನೀಡಿದೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕವೊಂದರಲ್ಲೇ 47,05,889 ಸೋಂಕಿತರಿದ್ದು, ಈ ವರೆಗೆ 1,56,747 ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 26,66,298 ಪ್ರಕರಣಗಳು ಬೆಳಕಿಗೆ ಬಂದಿವೆ. 18,84,051 ಸೋಂಕಿತರು ಗುಣಮುಖರಾಗಿದ್ದು, 92,568 ಜನರು ಮೃತಪಟ್ಟಿದ್ದಾರೆ.

ಭಾರತದಲ್ಲಿ 1,697,054, ರಷ್ಯಾದಲ್ಲಿ 8,39,981, ದಕ್ಷಿಣ ಆಫ್ರಿಕಾದಲ್ಲಿ 4,93,183, ಪೆರುವಿನಲ್ಲಿ 4,07,492, ಚಿಲಿಯಲ್ಲಿ 3,55,667, ಇಂಗ್ಲೆಂಡ್‌ನಲ್ಲಿ 3,03,181, ಸ್ಪೇನ್‌ನಲ್ಲಿ 3,35,602 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 46,119, ಮೆಕ್ಸಿಕೊದಲ್ಲಿ 46,688, ಇಟಲಿಯಲ್ಲಿ 35,141, ಪ್ರಾನ್ಸ್‌ನಲ್ಲಿ 30,265, ಸ್ಪೇನ್‌ನಲ್ಲಿ 28,445, ಪೆರುವಿನಲ್ಲಿ 19,021, ರಷ್ಯಾದಲ್ಲಿ 13,963, ಚಿಲಿಯಲ್ಲಿ 9,457, ದಕ್ಷಿಣ ಆಫ್ರಿಕಾದಲ್ಲಿ 8,005 ಮತ್ತು ಪಾಕಿಸ್ತಾನದಲ್ಲಿ 5,951 ಜನರು ಸಾವಿಗೀಡಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು