ಮಂಗಳವಾರ, ಆಗಸ್ಟ್ 3, 2021
21 °C

Covid-19 World Update | ಪಾಕಿಸ್ತಾನದ ಆರೋಗ್ಯ ಸಚಿವ ಜಾಫರ್ ಮಿರ್ಜಾಗೂ ಕೋವಿಡ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Covid19

ಇಸ್ಲಾಮಾಬಾದ್: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ವಿಶ್ವದಾದ್ಯಂತ ದಿನೇದಿನೇ ಹೆಚ್ಚುತ್ತಿದ್ದು, ಸೋಮವಾರ ರಾತ್ರಿ ವೇಳೆಗೆ 1.14 ಕೋಟಿಗೂ ಹೆಚ್ಚು ಜನ ಸೋಂಕಿತರಾಗಿದ್ದಾರೆ. 535,027 ಮಂದಿ ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ.

ಪಾಕಿಸ್ತಾನದ ಆರೋಗ್ಯ ಸಚಿವ ಡಾ. ಜಾಫರ್ ಮಿರ್ಜಾ ಅವರಿಗೂ ಸೋಂಕು ತಗುಲಿದೆ. ಮಿರ್ಜಾ ಅವರು ಪಾಕ್ ಪ್ರಧಾನಿಗೆ ಆರೋಗ್ಯ ಸೇವೆಗಳ ವಿಚಾರದಲ್ಲಿ ವಿಶೇಷ ಸಹಾಯಕರಾಗಿದ್ದಾರೆ. ಅವರಿಗೆ ಸಾಮಾನ್ಯ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು ಸದ್ಯ ಮನೆಯಲ್ಲೇ ಮುನ್ನೆಚ್ಚರಿಕೆ ವಹಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರಿಗೆ ಕೊರೊನಾ ತಗುಲಿರುವುದು ಶುಕ್ರವಾರ ದೃಢಪಟ್ಟಿತ್ತು.

ಈವರೆಗೆ ಪಾಕಿಸ್ತಾನದಲ್ಲಿ 231,818 ಜನರಿಗೆ ಸೋಂಕು ತಗುಲಿದ್ದು, 4,762 ಸಾವು ಸಂಭವಿಸಿದೆ.

ಇದನ್ನೂ ಓದಿ: 

ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 28.89 ಲಕ್ಷ ದಾಟಿದ್ದು, 130,007 ಮಂದಿ ಸಾವಿಗೀಡಾಗಿದ್ದಾರೆ. ಬ್ರೆಜಿಲ್‌ನಲ್ಲಿ 16.03 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 64,867 ಜನ ಮೃತಪಟ್ಟಿದ್ದಾರೆ. ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 686,777ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 10,271 ತಲುಪಿದೆ.

ಕೊರೊನಾದಿಂದಾಗಿ ಈವರೆಗೆ ಬ್ರಿಟನ್‌ನಲ್ಲಿ 44,321, ಮೆಕ್ಸಿಕೊದಲ್ಲಿ 30,639, ಸ್ಪೇನ್‌ನಲ್ಲಿ 28,385, ಇರಾನ್‌ನಲ್ಲಿ 11,731, ಇಟಲಿಯಲ್ಲಿ 34,869, ಫ್ರಾನ್ಸ್‌ನಲ್ಲಿ 29,896, ಜರ್ಮನಿಯಲ್ಲಿ 9,024 ಸಾವು ಸಂಭವಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು