ಶುಕ್ರವಾರ, ಜುಲೈ 30, 2021
23 °C

Covid-19 World Update | ರಷ್ಯಾದಲ್ಲಿ 7 ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Covid19

ಮಾಸ್ಕೊ: ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ವಿಶ್ವದಾದ್ಯಂತ ಮತ್ತಷ್ಟು ಏರಿಕೆಯಾಗುತ್ತಿದೆ. ರಷ್ಯಾದಲ್ಲಿ ಒಂದೇ ದಿನ 6,736 ಮಂದಿಗೆ ಸೋಂಕು ತಗುಲಿದ್ದು, 134 ಮಂದಿ ಮೃತಪಟ್ಟಿದ್ದಾರೆ.

ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಪ್ರಕಾರ, ರಷ್ಯಾದಲ್ಲಿ ಈವರೆಗೆ 680,283 ಮಂದಿಗೆ ಸೋಂಕು ತಗುಲಿದ್ದು, 10,145 ಸಾವು ಸಂಭವಿಸಿದೆ.

ಇದನ್ನೂ ಓದಿ: 

ಅಮೆರಿಕದಲ್ಲಿ ಒಂದೇ ದಿನ 50 ಸಾವಿರಕ್ಕೂ ಹೆಚ್ಚು ಜನರು ಸೋಂಕಿತರಾಗಿದ್ದಾರೆ. ಸದ್ಯ ಅಲ್ಲಿ 2,852,807 ಸೋಂಕಿತರಿದ್ದು, ಈವರೆಗೆ 129,718 ಮಂದಿ ಮೃತಪಟ್ಟಿದ್ದಾರೆ.

ಮಾಸ್ಕ್ ಕಡ್ಡಾಯಗೊಳಿಸಿದ ಇರಾನ್: ಕೋವಿಡ್ ತೀವ್ರವಾಗಿ ಹರಡುತ್ತಿರುವ ಕಾರಣ ಇರಾನ್‌ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಅಲ್ಲಿ ಈವರೆಗೆ 240,438 ಜನರಿಗೆ ಸೋಂಕು ತಗುಲಿದ್ದು, 11,571 ಮಂದಿ ಅಸುನೀಗಿದ್ದಾರೆ.

ಉಳಿದಂತೆ, ಬ್ರೆಜಿಲ್‌ನಲ್ಲಿ 15.77 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 64,265 ಜನ ಸಾವಿಗೀಡಾಗಿದ್ದಾರೆ. ಈವರೆಗೆ ಬ್ರಿಟನ್‌ನಲ್ಲಿ 44,305, ಸ್ಪೇನ್‌ನಲ್ಲಿ 28,385, ಇಟಲಿಯಲ್ಲಿ 34,861, ಪಾಕಿಸ್ತಾನದಲ್ಲಿ 4,712 ಮಂದಿ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು