ವಾಷಿಂಗ್ಟನ್: ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1.5 ಕೋಟಿ ಸನಿಹಕ್ಕೆ ಬಂದು ನಿಂತಿದೆ. ಸದ್ಯ ಜಗತ್ತಿನಲ್ಲಿ 1,45,38,115 ಕೋವಿಡ್ ಪ್ರಕರಣಗಳಿವೆ. ಈ ಪೈಕಿ 606,922 ಮಂದಿ ಸಾವಿಗೀಡಾಗಿದ್ದಾರೆ.

ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಎಂದಿನಂತೇ ಅಗ್ರ ಸ್ಥಾನದಲ್ಲಿ ಮುಂದುವರಿದೆ. ಅಲ್ಲಿ 37,74,769 (1,40,563 ಸಾವು) ಸೋಂಕು ಪ್ರಕರಣಗಳಿವೆ. ಬ್ರೆಜಿಲ್ನಲ್ಲಿ 20,98,389 (79,488) ಪ್ರಕರಣಗಳಿವೆ. ಭಾರತದಲ್ಲಿ 11,18,206 (27,497) ಸೋಂಕಿತರಿದ್ದಾರೆ.

ರಷ್ಯಾದಲ್ಲಿ 7,76,212 ಸೋಂಕಿತರಿದ್ದಾರೆ. ದಕ್ಷಿಣ ಆಫ್ರಿಕಾ ಕೊರೊನಾ ವೈರಸ್ನ ಹೊಸ ಹಾಟ್ಸ್ಪಾಟ್ ಆಗಿ ಗುರುತಿಸಿಕೊಂಡಿದೆ. ಅಲ್ಲಿ 3,64,328 ಸೋಂಕಿತರಿದ್ದಾರೆ. 5,033 ಮಂದಿ ಮೃತಪಟ್ಟಿದ್ದಾರೆ.

ಈ ಮಧ್ಯೆ, ಕೊರೊನಾ ವೈರಸ್ಗೆ ಅಕ್ಸ್ಫರ್ಡ್ ವಿಶ್ವವಿದ್ಯಾಲಯ ತಯಾರಿಸುತ್ತಿರುವ ಲಸಿಕೆಯು, ಸುರಕ್ಷಿತ ಮತ್ತು ಪ್ರತಿರೋಧ ಶಕ್ತಿ ಉದ್ದೀಪಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.