ಭಾನುವಾರ, ಜೂಲೈ 5, 2020
22 °C
ಸೆನೆಟ್‌ ಅನುಮೋದನೆ ಬಾಕಿ

ನ್ಯಾಯಾಧೀಶ ಹುದ್ದೆಗೆ ಭಾರತ ಮೂಲದ ವಿಜಯ್‌ ಶಂಕರ್‌ ನೇಮಕಕ್ಕೆ ಟ್ರಂಪ್‌ ಒಲವು

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಭಾರತ ಮೂಲದವರಾದ ಅಮೆರಿಕದ‌ ವಿಜಯ್‌ ಶಂಕರ್‌ ಅವರನ್ನು ಮೇಲ್ಮನವಿ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನಾಗಿ ನೇಮಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉದ್ದೇಶಿಸಿದ್ದಾರೆ.

ವಾಷಿಂಗ್ಟನ್‌ ಡಿಸಿಯಲ್ಲಿ ಇದು ಉನ್ನತ ನ್ಯಾಯಾಲಯವಾಗಿದೆ. ವಿಜಯ್‌ ಶಂಕರ್‌ ಅವರ ನೇಮಕಕ್ಕೆ ಸೆನೆಟ್‌ ಅನುಮೋದನೆ ನೀಡಬೇಕಾಗಿದೆ.

ಪ್ರಸ್ತುತ ವಿಜಯ್‌ ಅವರು ನ್ಯಾಯಾಂಗ ಇಲಾಖೆಯಲ್ಲಿ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಾಂಗ ಇಲಾಖೆ ಸೇರುವ ಮುನ್ನ ಖಾಸಗಿಯಾಗಿ ವಕೀಲಿ ವೃತ್ತಿ ಕೈಗೊಂಡಿದ್ದರು. 2012ರಲ್ಲಿ ನ್ಯಾಯಾಂಗ ಇಲಾಖೆ ಸೇರಿದ್ದರು.

ಕಾನೂನು ಪದವಿ ಪಡೆದ ಬಳಿಕ, ಮೇಲ್ಮನವಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಚೆಸ್ಟರ್‌ ಜೆ. ಸ್ಟ್ರೌಬ್‌ ಅವರಿಗೆ ಕಾನೂನು ಕ್ಲರ್ಕ್‌ ಆಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು