ಸೋಮವಾರ, ಜನವರಿ 18, 2021
19 °C

ಅಮೆರಿಕ: ಕೊರೊನಾ ಸೋಂಕಿತ ಸಾಕು ನಾಯಿ ಸಾವು!

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಪ್ರಾಣಿಯಿಂದ ಮನುಷ್ಯನಿಗೆ, ಮನುಷ್ಯನಿಂದ ಪ್ರಾಣಿಗೆ ಕೊರೊನಾ ಸೋಂಕು ಹರಡುತ್ತದೆಯೇ ಎಂಬುದು ಸಂಶೋಧನೆ, ಅಧ್ಯಯನದ ಹಂತದಲ್ಲಿರುವಾಗಲೇ, ಅಮೆರಿಕದಲ್ಲಿ ಕೊರೊನಾ ಸೋಂಕು ದೃಢಪಟ್ಟ ಸಾಕು ನಾಯಿಯೊಂದು ಸಾವಿಗೀಡಾಗಿರುವುದಾಗಿ ವರದಿಯೊಂದು ತಿಳಿಸಿದೆ.

ಜರ್ಮನ್‌ ಶೆಫರ್ಡ್ ತಳಿಯ ‘ಬಡ್ಡಿ' ಎಂಬ ಸಾಕು ನಾಯಿ ಸಾವಿಗೀಡಾಗಿದೆ. ಈ ನಾಯಿಗೆ ಜೂನ್‌ ತಿಂಗಳಲ್ಲಿ ಕೊರೊನಾ ಸೋಂಕು ತಗುಲಿರುವುದಾಗಿ ಅಮೆರಿಕದ ಕೃಷಿ ಇಲಾಖೆಯ ರಾಷ್ಟ್ರೀಯ ಪಶು ಸೇವೆಗಳ ಪ್ರಯೋಗಾಲಯ ದೃಢಪಡಿಸಿತ್ತು.

ತಿಂಗಳುಗಳ ಹಿಂದೆ ‘ಬಡ್ಡಿ'ಯ ಮಾಲೀಕ ರಾಬರ್ಟ್‌ ಮೊಹೊನೇಯ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ನಂತರ ಅವರ ಮನೆಯಲ್ಲಿದ್ದ ಈ ಬಡ್ಡಿಗೆ ಏಪ್ರಿಲ್ ಮಧ್ಯಭಾಗದಲ್ಲಿ ತೀವ್ರ ಉಸಿರಾಟದ ಸಮಸ್ಯೆಯಂತಹ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವು. ಜುಲೈ ತಿಂಗಳ ಹೊತ್ತಿಗೆ ನಾಯಿಯ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು ಎಂದು ಪ್ರಯೋಗಾಲಯದ ವರದಿಗಳು ತಿಳಿಸಿವೆ.

ಆದರೆ, ನಾಯಿಯ ಸಾವಿಗೆ ಕೊರೊನಾ ಸೋಂಕು ಕಾರಣ ಎಂದು ಖಚಿತವಾಗಿ ಹೇಳಲಾಗುತ್ತಿಲ್ಲ. ಏಕೆಂದರೆ ಈ ಪ್ರಾಣಿಯ ರಕ್ತಪರೀಕ್ಷೆ ವರದಿಯಲ್ಲಿ ನಾಯಿಗೆ ಲಿಂಫೋಮಿಯಾ, ಕ್ಯಾನ್ಸರ್‌ ರೋಗವಿರುವುದಾಗಿಯೂ ಉಲ್ಲೇಖವಾಗಿತ್ತು. 

ಯುಎಸ್‌ಡಿಎ ಪ್ರಕಾರ ಪ್ರಾಣಿಗಳಿಂದ ಮನುಷ್ಯನಿಗೆ ಕೊರೊನಾ ಸೋಂಕು ಹರಡಿರುವ ಉದಾಹರಣೆಗಳಿಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ಮನುಷ್ಯನಿಂದ ಪ್ರಾಣಿಗೆ ಸೋಂಕು ತಗುಲಿರುವುದಕ್ಕೆ ಆಧಾರಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು