ಭಾನುವಾರ, ಜೂಲೈ 12, 2020
25 °C

ಬಿಡೆನ್‌ ಡಿಜಿಟಲ್‌ ಪ್ರಚಾರಕ್ಕೆ ಭಾರತ ಮೂಲದ ಅಮೆರಿಕನ್‌ ಮೇಧಾ ರಾಜ್‌ ನೇತೃತ್ವ

ಪಿಟಿಐ Updated:

ಅಕ್ಷರ ಗಾತ್ರ : | |

ಜೊ ಬಿಡೆನ್‌

ವಾಷಿಂಗ್ಟನ್‌: ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಜೊ ಬಿಡೆನ್‌ ಅವರು ತಮ್ಮ ಡಿಜಿಟಲ್‌ ಚುನಾವಣಾ ಪ್ರಚಾರಾಂದೋಲನದ ಮುಖ್ಯಸ್ಥರಾಗಿ ಭಾರತ ಮೂಲದ ಅಮೆರಿಕನ್‌ ಪ್ರಜೆ ಮೇಧಾ ರಾಜ್‌ ಅವರನ್ನು ನೇಮಕ ಮಾಡಿದ್ದಾರೆ.

ಕೋವಿಡ್‌–19ರ ಕಾರಣದಿಂದ ಅಮೆರಿಕದ ಇಡೀ ಚುನಾವಣಾ ಪ್ರಚಾರವು ವರ್ಚುವಲ್‌ ಮಾಧ್ಯಮದಲ್ಲಿ ನಡೆಯುತ್ತಿರುವುದರಿಂದ ಈ ಹುದ್ದೆಗೆ ಹೆಚ್ಚಿನ ಮಹತ್ವ ಬಂದಿದೆ.

‘ಬಿಡೆನ್‌ ಅವರ ಡಿಜಿಟಲ್‌ ಪ್ರಚಾರದ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡು ಉತ್ಸಾಹಿತಳಾಗಿದ್ದೇನೆ. ಚುನಾವಣೆಗೆ 130 ದಿನ ಉಳಿದಿದ್ದು ನಾವು ಒಂದು ನಿಮಿಷವನ್ನೂ ವ್ಯರ್ಥಗೊಳಿಸುವುದಿಲ್ಲ’ ಎಂದು ಅವರು ಲಿಂಕ್ಡ್‌ಇನ್‌ ಮೂಲಕ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು