ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಮೆಕ್ಸಿಕೊದಲ್ಲಿ 7.4ರಷ್ಟು ತೀವ್ರತೆಯ ಭೂಕಂಪ: ಆರು ಮಂದಿ ಸಾವು

Last Updated 24 ಜೂನ್ 2020, 8:15 IST
ಅಕ್ಷರ ಗಾತ್ರ

ಮೆಕ್ಸಿಕೊ: ದಕ್ಷಿಣ ಮೆಕ್ಸಿಕೊದ ಒಹಾಕಾ ರಾಜ್ಯದಲ್ಲಿ ಮಂಗಳವಾರ ಭಾರೀ ತೀವ್ರತೆಯ ಭೂಕಂಪ ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.

ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 7.4ರಷ್ಟು ದಾಖಲಾಗಿದೆ. ಕಂಪನದ ತೀವ್ರತೆಗೆ ಕಟ್ಟಡಗಳು ಅದುರಿದ್ದು, ಜನರು ಭಯಗೊಂಡು ಮನೆಗಳಿಂದ ರಸ್ತೆಗೆ ಓಡಿ ಬಂದಿದ್ದಾರೆ.

ಭೂ ಕಂಪನದ ತೀವ್ರತೆಯು 7.4ರಷ್ಟಿತ್ತು. ಭೂ ಕಂಪನದ ಕೇಂದ್ರ ಬಿಂದು ಒಹಾಕಾದಿಂದ ಸುಮಾರು 700 ಕಿ.ಮೀ ದೂರ(430 ಮೈಲಿ) ಹಾಗೂ 23 ಕಿ.ಮೀ ಭೂಮಿಯಾಳದಲ್ಲಿ ಇತ್ತು ಎಂದು ಅಮೆರಿಕದ ಭೂಗರ್ಭ ಇಲಾಖೆ ತಿಳಿಸಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡಗಳು ಬಿದ್ದಿರುವುದರಿಂದ ಸಾವುನೋವು ಸಂಭವಿಸಿದೆ. ನಗರದ ಕ್ರೂಸೆಸಿಟಾ ಬಳಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ಭೂಕಂಪನ ಕೇಂದ್ರದಿಂದ 150 ಕಿ.ಮೀ ವ್ಯಾಪ್ತಿಯಲ್ಲಿರುವ ಪಟ್ಟಣಗಳಲ್ಲಿ ಐದು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬಂದರುಗಳು, ವಿಮಾನ ನಿಲ್ದಾಣಗಳು, ಸಂಸ್ಕರಣಾ ಘಟಕಗಳು ಮತ್ತು ಜಲವಿದ್ಯುತ್‌ ಸ್ಥಾವರಗಳು ಸೇರಿದಂತೆ ಮೂಲ ಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ’ ಎಂದು ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೈಲ ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಒಹಾಕಾದ ಸಲೀನಾ ಕ್ರೂಜ್‌ನಲ್ಲಿರುವ ಘಟಕವನ್ನು ಮುಚ್ಚಲಾಗಿದೆ ಎಂದು ಮೆಕ್ಸಿಕನ್‌ ಆಯಿಲ್‌ ಹೇಳಿದೆ.

‘ಮಾರುಕಟ್ಟೆ ಕುಸಿಯುವ ಅಪಾಯವಿರುವುದರಿಂದ ನಾವು ಬೇರೆ ಕಡೆಗೆ ಹೊರಡಬೇಕಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ನಾವು ಏನನ್ನೂ ಮಾರಾಟ ಮಾಡುತ್ತಿಲ್ಲ. ಇದೀಗ ಮಾರುಕಟ್ಟೆಯನ್ನು ಮುಚ್ಚಿದರೆ ನಾವು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಆರವತ್ತು ವರ್ಷದ ಹೂ ಮಾರಾಟಗಾರ ಜುವಾನಾ ಮಾರ್ಟಿನೆಜ್‌ ಅಳಲು ತೊಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT