ಶುಕ್ರವಾರ, ಅಕ್ಟೋಬರ್ 2, 2020
21 °C

Covid-19 World Update: ಅಮೆರಿಕದಲ್ಲಿ 46,321 ಹೊಸ ಪ್ರಕರಣ, 532 ಮಂದಿ ಸಾವು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ 432 ಹೊಸ ಪ್ರಕರಣಗಳು ವರದಿ ಆಗಿದ್ದು ಸೋಂಕಿತರ ಸಂಖ್ಯೆ 2,80,460 ಆಗಿದೆ. 15 ಮಂದಿ ಮಂಗಳವಾರ ಸಾವಿಗೀಡಾಗಿದ್ದಾರೆ  ಎಂದು ಆರೋಗ್ಯ ಸಚಿವಾಲಯ ಹೇಳಿದೆ. 

ಇಲ್ಲಿಯವರೆಗೆ 249397  ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು 1,013 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸಚಿವಾಲಯ ಹೇಳಿದೆ.

 ಅಮೆರಿಕದಲ್ಲಿ ಒಂದೇ ದಿನ 46,321 ಹೊಸ ಪ್ರಕರಣಗಳು ವರದಿ ಆಗಿದ್ದು, 532 ಮಂದಿ ಮೃತಪಟ್ಟಿದ್ದಾರೆ.

ಜಾಗತಿಕವಾಗಿ 216 ದೇಶಗಳಲ್ಲಿ ಕೊರೊನಾ ವೈರಸ್‌ ಹರಡಿದ್ದು ಭಾರತದಲ್ಲಿ ಸತತ 6ನೇ ದಿನವೂ ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದೆ.

ಭಾರತದಲ್ಲಿ ಸೋಂಕಿತರ ಪ್ರಮಾಣ 18 ಲಕ್ಷ ಗಡಿ ದಾಟಿದ್ದು ಸಾವಿನ ಸಂಖ್ಯೆ 38 ಸಾವಿರ ತಲುಪಿದೆ. ಲ್ಯಾಟಿನ್‌ ಅಮೆರಿಕ ಭಾಗದಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದು ಸೋಂಕಿತರ ಸಂಖ್ಯೆ 50 ಲಕ್ಷದ ಗಡಿ ದಾಟಿದೆ.

ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಜಗತ್ತಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1,83,40,451 ಆಗಿದೆ. ಇಲ್ಲಿಯವರೆಗೆ 6,95,318 ಮಂದಿ ಸಾವಿಗೀಡಾಗಿದ್ದಾರೆ. 1,16,65,214 ಸೋಂಕಿತರ ಗುಣಮುಖರಾಗಿದ್ದಾರೆ.

ಸೋಂಕಿನ ಪ್ರಮಾಣದಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು ಇಲ್ಲಿಯವರೆಗೂ 4,727,879 ಮಂದಿ ಸೋಂಕಿತರಿದ್ದು ಸಾವಿನ ಸಂಖ್ಯೆ 155,814ಕ್ಕೇರಿದೆ.

ಬ್ರೆಜಿಲ್‌ನಲ್ಲಿ 27,50,318 ಸೋಂಕಿತರಿದ್ದು ಎರಡನೇ ಸ್ಥಾನದಲ್ಲಿ ಮುಂದುವರೆದಿದೆ.  18,55,745 ಸೋಂಕಿತರಿರು ಭಾರತ ಮೂರನೇ ಸ್ಥಾನದಲ್ಲಿದೆ. ಉಳಿದಂತೆ ರಷ್ಯಾ ( 854,641) ನಾಲ್ಕನೇ ಸ್ಥಾನ, ದಕ್ಷಿಣ ಆಫ್ರಿಕಾ ( 516,862) 5 ನೇ ಸ್ಥಾನದಲ್ಲಿವೆ.
ಉಳಿದಂತೆ ಮೆಕ್ಸಿಕೊದಲ್ಲಿ 439,046, ಪೆರುವಿನಲ್ಲಿ  428,850 ಪ್ರಕರಣಗಳು ದಾಖಲಾಗಿವೆ.

ವೈದ್ಯಕೀಯ ಸಿಬ್ಬಂದಿಗಳಿಗೆ ಸೋಂಕು ತಗಲಿದರೆ ಅವರಿಗೆ 15 ದಿನ ರಜೆ ನೀಡಿ ವಿಶೇಷ ಭತ್ಯೆ ನೀಡುವ ಯೋಜನೆಯನ್ನು ಆಸ್ಟ್ರೇಲಿಯಾ ಸರ್ಕಾರ ಘೋಷಣೆ ಮಾಡಿದೆ.

ಬ್ರಿಟನ್‌ನಲ್ಲಿ ಸಾವಿನ ಸಂಖ್ಯೆ 48 ಸಾವಿರ ದಾಟಿದೆ. ಬ್ರಿಟನ್‌ ಸರ್ಕಾರ ಹೆಚ್ಚು ಪ್ರಮಾಣದಲ್ಲಿ ತಪಾಸಣೆ ನಡೆಸಲು ಆದ್ಯತೆ ನೀಡಿದೆ. ಕೇವಲ 90 ನಿಮಿಷಗಳಲ್ಲಿ ಪರೀಕ್ಷೆಯ ವರದಿ ನೀಡುವಂತಹ ನೂತನ ಯೋಜನೆಗೆ ಚಾಲನೆ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು