ವಾಷಿಂಗ್ಟನ್: ಕೊರೊನಾ ಸೋಂಕು ವ್ಯಾಪಕವಾಗುತ್ತಿದ್ದರೂ ಶಾಲೆಗಳನ್ನು ಮರು ಆರಂಭಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ತಪ್ಪಿದಲ್ಲಿ ಸರ್ಕಾರ ನೀಡುವ ಹಣಕಾಸು ನೆರವನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ.

ಈ ನಡುವೆ, ‘ಶಾಲಾ–ಕಾಲೇಜುಗಳ ಮರು ಆರಂಭಕ್ಕೆ ಪೂರಕವಾದಂತಹ ಹೊಸ ಮಾರ್ಗಸೂಚಿಗಳನ್ನು ರೋಗ ನಿಯಂತ್ರಣ ಕೇಂದ್ರದ ಅಧಿಕಾರಿಗಳು ಶೀಘ್ರವೇ ಬಿಡುಗಡೆ ಮಾಡುವರು’ ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ಘೋಷಿಸಿರುವ ಬೆನ್ನಲ್ಲೇ, ಟ್ರಂಪ್ ಅವರಿಂದ ಈ ಎಚ್ಚರಿಕೆ ಮಾತುಗಳು ಹೊರಬಿದ್ದಿವೆ.

ವಿಚಿತ್ರ ಎಂದರೆ, ಕೊರೊನಾ ಸೋಂಕು ಪ್ರಸರಣ ತಡೆಯಲು ಆರೋಗ್ಯಾಧಿಕಾರಿಗಳು ಜಾರಿಗೊಳಿಸಿರುವ ಸುರಕ್ಷತಾ ಮಾರ್ಗಸೂಚಿಗಳು ಅವಾಸ್ತವಿಕ ಹಾಗೂ ವೆಚ್ಚದಾಯಕವಾಗಿವೆ ಎಂದು ಸ್ವತಃ ಟ್ರಂಪ್ ಟೀಕಿಸಿದ್ದಾರೆ.

ಇನ್ನು, ಟ್ರಂಪ್ ಅವರ ಹೇಳಿಕೆಗೆ ವ್ಯತಿರಿಕ್ತ ಎಂಬಂತೆ, ನ್ಯೂಯಾರ್ಕ್ ಮೇಯರ್ ಬಿಲ್ ಡಿ ಬ್ಲೆಸಿಯೊ ಅವರು ‘ಎಲ್ಲ ಮಕ್ಕಳು ಮರಳಿ ಶಾಲೆಗೆ ಬರುವಂತಹ ಪರಿಸ್ಥಿತಿ ಬಹುತೇಕ ಶಾಲೆಗಳಲ್ಲಿ ಇಲ್ಲ. ವಾರದಲ್ಲಿ 2–3 ದಿನ ಮಾತ್ರ ಮಕ್ಕಳು ಶಾಲೆಗೆ ಬರಲಿದ್ದು, ಉಳಿದ ದಿನಗಳಲ್ಲಿ ಆನ್ಲೈನ್ ಮೂಲಕವೇ ಶಿಕ್ಷಣ ಪಡೆಯುವರು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.