ಭಾನುವಾರ, ಜುಲೈ 25, 2021
22 °C

ವಿಯೆಟ್ನಾಂ: ಪಾಕ್ ಪೈಲಟ್‌ಗಳ ಅಮಾನತು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಹನೊಯ್: ತನ್ನ ಸ್ಥಳೀಯ ವಿಮಾನಯಾನ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪಾಕಿಸ್ತಾನದ ಪೈಲಟ್‌ಗಳನ್ನು ಅಮಾನತುಗೊಳಿಸಿರುವುದಾಗಿ ವಿಯೆಟ್ನಾಂ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎವಿ) ತಿಳಿಸಿದೆ. ಪಾಕ್‌ನ ಕೆಲವು ಪೈಲಟ್‌ಗಳು ‘ಸಂಶಯಾಸ್ಪದ’ ಪರವಾನಗಿ ಹೊಂದಿದ್ದಾರೆಂದು ಐಎಟಿಎ ಕಳವಳ ವಕ್ಯಕ್ತಪಡಿಸಿದ ಬೆನ್ನಲ್ಲೇ ವಿಯೆಟ್ನಾಂ ಈ ಕ್ರಮ ಕೈಗೊಂಡಿದೆ.

ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಯ (ಪಿಐಎ) ಪೈಲಟ್‌ಗಳ ಪರವಾನಗಿಯಲ್ಲಿ ಅಕ್ರಮಗಳು ನಡೆದಿದ್ದು, ಸುರಕ್ಷತಾ ವಿಷಯದಲ್ಲಿ ಗಂಭೀರ ಲೋಪಗಳಾಗುತ್ತಿವೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆ (ಐಎಟಿಎ) ಇತ್ತೀಚೆಗೆ ಎಚ್ಚರಿಸಿತ್ತು. ಪಿಐಎ ಕೂಡ 262 ಪೈಲಟ್‌ಗಳನ್ನು ಅಮಾನತು ಮಾಡುವುದಾಗಿ ಕಳೆದ ವಾರದ ಕೊನೆಯಲ್ಲಿ ತಿಳಿಸಿತ್ತು.

ವಿಯೆಟ್ನಾಂ ನಾಗರಿಕ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲಾ ಪಾಕಿಸ್ತಾನಿ ಪೈಲಟ್‌ಗಳನ್ನು ಅಮಾನತುಗೊಳಿಸುವಂತೆ ಸಿಎಎವಿ ಮುಖ್ಯಸ್ಥರು ಆದೇಶಿಸಿದ್ದಾರೆ ಎಂದು ಸೋಮವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಂದಿನ ಆದೇಶ ಬರುವವರೆಗೂ ಅಮಾನತು ಜಾರಿಯಲ್ಲಿರುತ್ತದೆ. ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಪೈಲಟ್‌ಗಳ ಪೂರ್ವಾಪರಗಳನ್ನು ಪರಿಶೀಲಿಸಲಾಗುವುದು ಎಂದು ಸಿಎಎವಿ ಹೇಳಿದೆ.

ಪಾಕಿಸ್ತಾನದ 27 ಪೈಲಟ್‌ಗಳಿಗೆ ವಿಯೆಟ್ನಾಂ ಪರವಾನಗಿ ನೀಡಿತ್ತು. ಇದರಲ್ಲಿ 12 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಇತರ 15 ಪೈಲಟ್‌ಗಳ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ. ಇವರಲ್ಲಿ ಕೆಲವರು ಕೊರೊನಾ ಸೋಂಕು ಪಿಡುಗು ತಲೆದೋರಿದ ನಂತರ ಸಕ್ರಿಯರಾಗಿರಲಿಲ್ಲ ಎಂದು ಸಿಎಎವಿ ಮಾಹಿತಿ ನೀಡಿದೆ.

ವಿಯೆಟ್ನಾಂ ಮತ್ತು ಬ್ಯಾಂಬೂ ವಿಮಾನಯಾನ ಸಂಸ್ಥೆಗಳು ಪಾಕಿಸ್ತಾನಿ ಪೈಲಟ್‌ಗಳ ಸೇವೆಯನ್ನು ಬಳಸಿಕೊಳ್ಳುವುದಿಲ್ಲ ಎಂದು ಸಿಎಎವಿ ತಿಳಿಸಿದೆ.

ವಿಯೆಟ್ನಾಂ ಏರ್‌ಲೈನ್ಸ್‌ನಲ್ಲಿ 1,260 ಪೈಲೆಟ್‌ಗಳು ಇದ್ದಾರೆ. ಇವರಲ್ಲಿ ಅರ್ಧದಷ್ಟು ಮಂದಿ ವಿದೇಶಿ ಪೌರತ್ವ ಹೊಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು