ಶನಿವಾರ, ಸೆಪ್ಟೆಂಬರ್ 18, 2021
28 °C

ಕೋವಿಡ್‌ನ ಮೊದಲ ಅಲೆ ನಿಯಂತ್ರಣದತ್ತ ಗಮನ ಅಗತ್ಯ: ವಿಶ್ವ ಆರೋಗ್ಯ ಸಂಸ್ಥೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಜಿನೀವಾ: ‘ಕೊರೊನಾ ಸೋಂಕಿನ ಎರಡನೇ ಅಲೆ ಯಾವಾಗ ಆರಂಭವಾಗಬಹುದು ಎಂಬುದಕ್ಕಿಂತಲೂ, ಈಗಿನ ಉತ್ತುಂಗ ಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಗಮನ ನೀಡಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ವಿಭಾಗದ ಮುಖ್ಯಸ್ಥ ಡಾ. ಮೈಕಲ್‌ ರಿಯಾನ್‌ ಹೇಳಿದ್ದಾರೆ.

‘ಕೊರೊನಾದ ಮೊದಲ ಅಲೆಯ ಎರಡನೆಯ ಉತ್ತುಂಗವನ್ನು ಈಗ ಜಗತ್ತು ಎದುರಿಸುತ್ತಿದೆ. ವೈರಸ್‌ ಅನ್ನು ನಿಯಂತ್ರಿಸಿ, ಪ್ರಸರಣವನ್ನು ತಡೆಯಲು ನಾವಿನ್ನೂ ಸಫಲರಾಗಿಲ್ಲ. ಮೊದಲ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಿ ಅನುಭವ ಪಡೆದರೆ, ಎರಡನೆಯ ಅಲೆಯನ್ನು ಸುಲಭವಾಗಿ ಎದುರಿಸಬಹುದು’ ಎಂದು ರಿಯಾನ್‌ ಹೇಳಿದ್ದಾರೆ.

ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಶುಚಿತ್ವ ಕಾಪಾಡುವುದು, ಸೋಂಕಿತರ ಸಂಪರ್ಕಕ್ಕೆ ಬಂದಿರುವವರನ್ನು ಪ್ರಸರಣದ ಹಾದಿಯನ್ನು ಪತ್ತೆ ಮಾಡುವ ಮೂಲಕ ಸೋಂಕು ನಿಯಂತ್ರಿಸಬಹುದು. ಪರಿಸ್ಥಿತಿಗೆ ಅನುಗುಣವಾಗಿ ಆಯಾ ದೇಶದ ಜನರು ಮತ್ತು ಸರ್ಕಾರಗಳು ನೀತಿ, ನಡವಳಿಕೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಮಾಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು