ವಿಜಯಪುರ: ಟ್ಯಾಂಕರ್ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ನೀರು ಪೂರೈಸುತ್ತಿರುವ ವಾಹನಗಳ ಮಾಲೀಕರಿಗೆ ಹಲವು ಬಾರಿ ಸೂಚಿಸಿದರೂ; ಉದ್ದೇಶ ಪೂರ್ವಕವಾಗಿ ತಮ್ಮ ಬಿಲ್ ಸಲ್ಲಿಸಿಲ್ಲ. ಹಿಂದಿನ ಏಪ್ರಿಲ್ 30ರವರೆಗಿನ ಬಿಲ್ಗಳನ್ನು ಆಯಾ ತಾಲ್ಲೂಕು ಆಡಳಿತಕ್ಕೆ ಸಲ್ಲಿಸಲು ಮೇ 6ರ ಸೋಮವಾರ ಕೊನೆ ದಿನ.

ಇದರ ಬಳಿಕ ಸಲ್ಲಿಸುವ ಬಿಲ್ಗಳನ್ನು ಮಾನ್ಯ ಮಾಡುವುದಿಲ್ಲ. ಸಕಾಲಕ್ಕೆ ಹಣ ಬಿಡುಗಡೆಯಾಗದಿದ್ದರೆ, ತಾಲ್ಲೂಕು ಆಡಳಿತವಾಗಲಿ, ಜಿಲ್ಲಾ ಆಡಳಿತವಾಗಲಿ ಹೊಣೆಗಾರಿಕೆ ಹೊರುವುದಿಲ್ಲ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಖಾಸಗಿ ಬೋರ್ವೆಲ್ ಹೊಂದಿರುವವರು ನೀರು ಪೂರೈಕೆಗಾಗಿ ಮಾಸಿಕ ಬಾಡಿಗೆ ₨ 15,000 ದರದಲ್ಲಿ ಜಿಲ್ಲಾಡಳಿತಕ್ಕೆ ನೀಡಬಹುದಿದ್ದು, ಆಸಕ್ತರು 1077ಗೆ ಕರೆ ಮಾಡಿ ತಿಳಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.