ಮಂಗಳವಾರ, ಜನವರಿ 31, 2023
26 °C

Apple iPhone | ಮೇಡ್ ಇನ್ ಇಂಡಿಯಾ ಐ‍ಫೋನ್‌ಗೆ ಜಾಗತಿಕ ಬೇಡಿಕೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: 2025ರ ವೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರತಿ ನಾಲ್ಕು ಐಫೋನ್‌ಗಳಲ್ಲಿ ಒಂದು ಐಫೋನ್ ಭಾರತದಲ್ಲಿ ತಯಾರಾಗಿದ್ದಾಗಿರುತ್ತದೆ ಎಂದು ಜೆ.ಪಿ. ಮಾರ್ಗನ್ ವಿಶ್ಲೇಷಕರು ಹೇಳಿದ್ದಾರೆ.

ಈಗಾಗಲೇ ಐಫೋನ್ 14 ಅನ್ನು ಭಾರತದ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಜತೆಗೆ, ಆ್ಯಪಲ್ ಕಂಪನಿ ಚೀನಾದಲ್ಲಿ ಇರುವ ಉತ್ಪಾದನಾ ಘಟಕಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಸಲುವಾಗಿ, ಬೇರೆ ರಾಷ್ಟ್ರಗಳಲ್ಲಿ ಘಟಕ ಸ್ಥಾಪಿಸಲು ಮುಂದಾಗಿದೆ.

ಇದರಿಂದಾಗಿ ಭಾರತ, ವಿಯೆಟ್ನಾಂಗಳಲ್ಲಿ ಹೆಚ್ಚಿನ ಹೂಡಿಕೆ ಮೂಲಕ ತಯಾರಿಕ ಘಟಕ ವಿಸ್ತರಣೆಗೆ ಆದ್ಯತೆ ನೀಡಿದೆ.

ಚೀನಾದಲ್ಲಿ ಕೋವಿಡ್ ಪರಿಣಾಮ ನೂತನ ಸರಣಿಯ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಉತ್ಪಾದನೆ ಕುಸಿತವಾಗಿದೆ.

ಅಲ್ಲದೆ, ಮಾರುಕಟ್ಟೆಗೆ ಪೂರೈಕೆ ಸರಪಣಿ ಕೂಡ ಸಮಸ್ಯೆಯಾಗಿದ್ದು, ಹೊಸ ಪ್ರೊ ಮಾದರಿಗಳನ್ನು ಬುಕ್ ಮಾಡಿದ ಗ್ರಾಹಕರು ಕನಿಷ್ಠ ಎರಡು ತಿಂಗಳು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರಿಂದಾಗಿ ಒಂದೇ ಘಟಕದ ಮೇಲಿನ ಅವಲಂಬನೆ ಕಡಿಮೆ ಮಾಡಿ, ಮುಂದಿನ ಹಂತದಲ್ಲಿ ಚೀನಾ ಹೊರತಾದ ರಾಷ್ಟ್ರಗಳಲ್ಲಿ ಹೆಚ್ಚಿನ ಐಫೋನ್ ಉತ್ಪಾದನೆಗೆ ಆ್ಯಪಲ್ ಕ್ರಮ ಕೈಗೊಳ್ಳುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು