Apple | ಹೊಸ ಮಾದರಿಯ ಹೋಮ್‌ಪಾಡ್ ಬಿಡುಗಡೆ ಮಾಡಿದ ಆ್ಯಪಲ್
ಬೆಂಗಳೂರು: ಸ್ಮಾರ್ಟ್ ಸ್ಪೀಕರ್ ಶ್ರೇಣಿಯಲ್ಲಿ ಪ್ರೀಮಿಯಂ ಸ್ಥಾನ ಪಡೆದಿರುವ ಆ್ಯಪಲ್, ಹೋಮ್‌ಪಾಡ್ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ.
ಆ್ಯಪಲ್ ಹೋಮ್‌ಪಾಡ್ 2nd ಜನರೇಶನ್ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೊಸ ವಿನ್ಯಾಸ, ಗರಿಷ್ಠ ಮತ್ತು ಅತ್ಯಂತ ಸ್ಪಷ್ಟ ಸೌಂಡ್, ಸಿರಿ ವೈಶಿಷ್ಟ್ಯಗಳು ಹೊಸ ಹೋಮ್‌ಪಾಡ್ ಸ್ಪೀಕರ್‌ನಲ್ಲಿವೆ ಎಂದು ಕಂಪನಿ ಹೇಳಿದೆ.
ನೂತನ ಹೋಮ್‌ಪಾಡ್ 2nd ಜೆನ್ ಆವೃತ್ತಿ, ಮಿಡ್‌ನೈಟ್ ಮತ್ತು ವೈಟ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಾಗಲಿದೆ.
ವೈ–ಫೈ ಮತ್ತು ಬ್ಲೂಟೂತ್ ಮೂಲಕ ಐಫೋನ್, ಮ್ಯಾಕ್ ಹಾಗೂ ಐಪ್ಯಾಡ್ ಜತೆಗೆ ಹೋಮ್‌ಪಾಡ್ ಕನೆಕ್ಟ್ ಮಾಡಿ ಬಳಸಬಹುದು. ಸ್ಮಾರ್ಟ್ ಹೋಮ್ ಕಂಟ್ರೋಲ್ ಜತೆಗೆ, ಉತ್ತಮ ಸಂಗೀತ ಕೇಳಲು ಆ್ಯಪಲ್ ನೂತನ ಹೋಮ್‌ಪಾಡ್ ಪ್ರಯೋಜನಕಾರಿ ಎಂದು ಕಂಪನಿ ತಿಳಿಸಿದೆ.
ಬಜೆಟ್ ಸರಣಿ ಗ್ಯಾಲಕ್ಸಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್
ಬೆಲೆ ಮತ್ತು ಲಭ್ಯತೆ
ನೂತನ ಆ್ಯಪಲ್ 2nd ಜೆನ್ ಹೋಮ್‌ಪಾಡ್, ₹32,900 ದರ ಹೊಂದಿದ್ದು, ಈಗಾಗಲೇ ಪ್ರಿ ಬುಕಿಂಗ್ ಆರಂಭವಾಗಿದೆ. ಫೆಬ್ರುವರಿ ಮೊದಲ ವಾರದಲ್ಲಿ ಖರೀದಿಗೆ ಲಭ್ಯವಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.