ಭಾನುವಾರ, ಜೂನ್ 26, 2022
22 °C

iPad Air: ಎಂ1 ಚಿಪ್ ಸಹಿತ ಆಕರ್ಷಕ ಐಪ್ಯಾಡ್ ಪರಿಚಯಿಸಿದ ಆ್ಯಪಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಗಳವಾರ ನಡೆದ ವರ್ಚುವಲ್ ಈವೆಂಟ್‌ನಲ್ಲಿ ಆ್ಯಪಲ್, ಮಾರುಕಟ್ಟೆಗೆ ನೂತನ ಸರಣಿಯ ಐಪ್ಯಾಡ್ ಏರ್ ಬಿಡುಗಡೆ ಮಾಡಿದೆ.

ಆ್ಯಪಲ್ ಅಭಿವೃದ್ಧಿಪಡಿಸಿರುವ ಎಂ1 ಚಿಪ್‌ ಅನ್ನು ಹೊಸ ಐಪ್ಯಾಡ್ ಏರ್‌ನಲ್ಲಿ ಬಳಸಿಕೊಳ್ಳಲಾಗಿದೆ.

ಐಪ್ಯಾಡ್ ಏರ್ 2022
ನೂತನ ಐಪ್ಯಾಡ್ ಏರ್‌ 2022, ವೈ–ಫೈ ಮತ್ತು 64 ಜಿಬಿ ಸ್ಟೊರೇಜ್ ಮಾದರಿಗೆ ₹54,900 ಮತ್ತು ವೈ–ಫೈ+ಸೆಲ್ಯೂಲರ್ 64 ಜಿಬಿ ಆವೃತ್ತಿಗೆ ₹68,900 ದರ ನಿಗದಿಪಡಿಸಲಾಗಿದೆ.

ಹೊಸ ಐಪ್ಯಾಡ್ ಏರ್, ನೀಲಿ, ಸ್ಪೇಸ್ ಗ್ರೇ, ಸ್ಟಾರ್‌ಲೈಟ್, ಪಿಂಕ್ ಮತ್ತು ಪರ್ಪಲ್ ಎಂಬ ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ.

ನೂತನ ಐಪ್ಯಾಡ್ ಏರ್ ಮಾದರಿಯಲ್ಲಿ ಐಪ್ಯಾಡ್‌ಓಎಸ್ 15, 10.9 ಇಂಚಿನ ರೆಟಿನಾ ಡಿಸ್‌ಪ್ಲೇ, ಒಕ್ಟಾ ಕೋರ್ ಎಂ1 ಚಿಪ್ ಮತ್ತು 8 ಜಿಬಿ RAM ಇದೆ.

ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ವೈಡ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆಲ್ಫಿ ಕ್ಯಾಮೆರಾ ಕೂಡ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು