ಶನಿವಾರ, ಮೇ 15, 2021
25 °C

iPhone 12: ಆಕರ್ಷಕ ಪರ್ಪಲ್ ಐಫೋನ್ ಆವೃತ್ತಿ ಬಿಡುಗಡೆ ಮಾಡಿದ ಆ್ಯಪಲ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Apple INC

ಬೆಂಗಳೂರು: ಆ್ಯಪಲ್, ಜನಪ್ರಿಯ ಐಫೋನ್ ಸರಣಿಯಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದ್ದ ಐಫೋನ್ 12 ಮಾದರಿಯಲ್ಲಿ ನೂತನ ಪರ್ಪಲ್ ಆವೃತ್ತಿಯನ್ನು ಪರಿಚಯಿಸಿದೆ.

ಐಫೋನ್ 12 ಮತ್ತು ಐಫೋನ್ 12 ಮಿನಿ ಹೊಸ ಪರ್ಪಲ್ ಬಣ್ಣದಲ್ಲಿ ಲಭ್ಯವಿದ್ದು, ಏಪ್ರಿಲ್ 23ರಿಂದ ಪ್ರಿ ಬುಕಿಂಗ್ ಆರಂಭವಾಗಲಿದೆ. ಏಪ್ರಿಲ್ 30ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ.

ಐಫೋನ್ 12 ಪರ್ಪಲ್ ಎಡಿಶನ್

ಹೊಸ ಐಫೋನ್ 12 ಸರಣಿ, A14 ಬಯಾನಿಕ್ ಚಿಪ್ ಹೊಂದಿದ್ದು, OLED ಡಿಸ್‌ಪ್ಲೇ ಸಹಿತ ಲಭ್ಯ.

ಐಫೋನ್ 12, 6.1 ಇಂಚಿನ ಡಿಸ್‌ಪ್ಲೇ ಮತ್ತು ಐಫೋನ್ 12 ಮಿನಿ 5.4 ಇಂಚಿನ ಡಿಸ್‌ಪ್ಲೇ ಹೊಂದಿದೆ. ಪ್ರಸ್ತುತ ಹೊಸ ಪರ್ಪಲ್ ಬಣ್ಣದ ಆವೃತ್ತಿ ಸೇಪರ್ಡೆಯೊಂದಿಗೆ ಐಫೋನ್ 12 ಮತ್ತು ಐಫೋನ್ 12 ಮಿನಿ ಕಪ್ಪು, ಬಿಳಿ, ಪ್ರಾಡಕ್ಟ್ ರೆಡ್, ಗ್ರೀನ್, ಬ್ಲೂ ಸಹಿತ 6 ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ಅಲ್ಲದೆ, 64GB, 128GB ಮತ್ತು  256GB ಎಂಬ ಮೂರು ಆವೃತ್ತಿಗಳಲ್ಲಿ ದೊರೆಯಲಿದ್ದು, ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ವೈಡ್ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮರಾ ಲೆನ್ಸ್ ಹೊಂದಿದೆ. 12 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ.

ಐಫೋನ್ 12 ಸರಣಿ ಬೆಲೆ ದೇಶದಲ್ಲಿ ₹69,900 ರಿಂದ ಆರಂಭವಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು