ಮಂಗಳವಾರ, ಫೆಬ್ರವರಿ 7, 2023
27 °C
ಆ್ಯಪಲ್ ಮೂರನೇ ತ್ರೈಮಾಸಿಕದಲ್ಲಿ ಗರಿಷ್ಠ ಪ್ರಮಾಣದ ಗಳಿಕೆ

iPhone Sales | ದೇಶದಲ್ಲಿ ದಾಖಲೆಯ ಗಳಿಕೆ ಕಂಡ ಆ್ಯಪಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೆಪ್ಟೆಂಬರ್‌ಗೆ ಕೊನೆಯಾದ ಮೂರನೇ ತ್ರೈಮಾಸಿಕ ವರದಿಯನ್ನು ಆ್ಯಪಲ್ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಗರಿಷ್ಠ ಪ್ರಮಾಣದ ಗಳಿಕೆ ದಾಖಲಿಸಿರುವುದಾಗಿ ಹೇಳಿದೆ.

ಜಾಗತಿಕವಾಗಿ ಆ್ಯಪಲ್, ಕಳೆದ ತ್ರೈಮಾಸಿಕದಲ್ಲಿ 90.1 ಬಿಲಿಯನ್ ಡಾಲರ್ ಆದಾಯ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 8ರಷ್ಟು ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ಐಫೋನ್ ಮಾರಾಟ ಪ್ರಮಾಣದಲ್ಲಿ ದಾಖಲೆ ಏರಿಕೆಯಾಗಿದ್ದು, ಅತ್ಯಧಿಕ ಮೊತ್ತವನ್ನು ಗಳಿಸಿರುವುದಾಗಿ ಆ್ಯಪಲ್ ತಿಳಿಸಿದೆ.

ಭಾರತ ಮಾತ್ರವಲ್ಲದೆ, ಇಂಡೋನೇಷ್ಯಾ, ಮೆಕ್ಸಿಕೊ ಮತ್ತು ವಿಯೆಟ್ನಾಂಗಳಲ್ಲೂ ಆ್ಯಪಲ್ ಆದಾಯ ಏರಿಕೆಯಾಗಿದೆ.

ಡಾಲರ್ ಮೌಲ್ಯವರ್ಧನೆ ಜತೆಗೆ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಆ್ಯಪಲ್ ಉತ್ಪನ್ನ ಪೂರೈಕೆ ಮಾಡಿರುವುದು ಗಳಿಕೆ ಹೆಚ್ಚಲು ಕಾರಣ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು