ಸೋಮವಾರ, ಮೇ 17, 2021
31 °C

ದೇಶದಲ್ಲಿ ಐಫೋನ್‌ ಮಾರಾಟ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಆ್ಯಪಲ್‌ ಕಂಪನಿಯು ಭಾರತದಲ್ಲಿ ಡಿಸೆಂಬರ್ ತ್ರೈಮಾಸಿಕದಲ್ಲಿ ಐಫೋನ್‌ ಮಾರಾಟದಲ್ಲಿ ಎರಡಂಕಿ ಪ್ರಗತಿ ದಾಖಲಿಸಿದೆ.ಐಪಾಡ್ಸ್‌ಗೂ ಉತ್ತಮ ಬೇಡಿಕೆ ಇದೆ ಎಂದು ಕಂಪನಿ ತಿಳಿಸಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಭಾರತವಲ್ಲದೆ, ಚೀನಾ, ಬ್ರೆಜಿಲ್‌, ಥಾಯ್ಲೆಂಡ್‌, ಟರ್ಕಿಯಲ್ಲಿ ಹಾಗೂ ಅಭಿವೃದ್ಧಿ ಹೊಂದಿರುವ ದೇಶಗಳಾದ ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌ ಮತ್ತು ಸಿಂಗಪುರದಲ್ಲಿಯೂ ಎರಡಂಕಿ ಮಾರಾಟ ಪ್ರಗತಿ ಸಾಧಿಸಲಾಗಿದೆ ಎಂದು ಸಿಇಒ ಟಿಮ್‌ ಕುಕ್‌ ತಿಳಿಸಿದ್ದಾರೆ.

ಹೋಮ್‌ಪಾಡ್‌: ಭಾರತದ ಮಾರುಕಟ್ಟೆಗೆ ಸ್ಮಾರ್ಟ್‌ ಸ್ಪೀಕರ್‌ ‘ಹೋಮ್‌ಪಾಡ್‌’ ಬಿಡುಗಡೆ ಮಾಡಲಿದೆ. ಫೆಬ್ರುವರಿ ಅಂತ್ಯದ ವೇಳೆಗೆ ಲಭ್ಯವಾಗುವ ನಿರೀಕ್ಷೆ ಇದೆ.

ಗೂಗಲ್‌ ಹೋಮ್‌ ಮತ್ತು ಅಮೆಜಾನ್‌ ಎಕೊಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಬರಲಿದ್ದು, ಇದರ ಬೆಲೆ ₹ 19,900 ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು