ಬೆಂಗಳೂರು: ತಂತ್ರಜ್ಞಾನ ದಿಗ್ಗಜ ಸಂಸ್ಥೆ ಆ್ಯಪಲ್ ಭಾರತದಲ್ಲಿ ತನ್ನ ಮೂರನೇ ಆ್ಯಪಲ್ ಸ್ಟೋರ್ಅನ್ನು ನಗರದ ಹೆಬ್ಬಾಳದಲ್ಲಿ ತೆರೆಯುತ್ತಿದೆ. ದಕ್ಷಿಣ ಭಾರತದಲ್ಲಿ ಇದು ಆ್ಯಪಲ್ನ ಮೊದಲ ಸ್ಟೋರ್ ಆಗಿದ್ದು, ಮುಂಬೈನಲ್ಲಿ ಆ್ಯಪಲ್ ಬಿಕೆಸಿ ಹಾಗೂ ದೆಹಲಿಯಲ್ಲಿ ಆ್ಯಪಲ್ ಸಾಕೇತ್ ಹೆಸರಿನಲ್ಲಿ ಎರಡು ಅಧಿಕೃತ ಸ್ಟೋರ್ಗಳು ಈಗಾಗಲೇ ಕಾರ್ಯಾಚರಿಸುತ್ತಿವೆ.

ಸೆ.2ರಂದು 'ಆ್ಯಪಲ್ ಹೆಬ್ಬಾಳ' ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಆ್ಯಪಲ್ ಕಂಪನಿಯ ಐಫೋನ್, ಐಪ್ಯಾಡ್, ಐಮ್ಯಾಕ್ ಸಹಿತ ಎಲ್ಲ ರೀತಿಯ ಸಾಧನಗಳು ಈ ಸ್ಟೋರ್ನಲ್ಲಿ ಲಭ್ಯವಿರುತ್ತದೆ. ಗ್ರಾಹಕರು ಆ್ಯಪಲ್ ಹೆಬ್ಬಾಳ ಮಳಿಗೆಯಲ್ಲಿ ಈ ಸಾಧನಗಳ ಸಂಪೂರ್ಣ ಅನುಭವವನ್ನೂ ಪಡೆದುಕೊಳ್ಳಬಹುದಾಗಿದ್ದು, ಉತ್ಪನ್ನಗಳ ಸೇವೆ ಮತ್ತು ಬೆಂಬಲ ಇಲ್ಲಿ ಲಭ್ಯವಿದೆ.

'ಆ್ಯಪಲ್ ಹೆಬ್ಬಾಳ'ದಲ್ಲಿ ಏನೇನಿದೆ?

ಹೆಬ್ಬಾಳದ ಬಳ್ಳಾರಿ ರಸ್ತೆಯಲ್ಲಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಮೊದಲ ಮಹಡಿಯಲ್ಲಿರುವ 'ಆ್ಯಪಲ್ ಹೆಬ್ಬಾಳ' ಸ್ಟೋರ್ನಲ್ಲಿ ಆ್ಯಪಲ್ನ ವಿನೂತನ ಉತ್ಪನ್ನಗಳೆಲ್ಲವೂ ಲಭ್ಯ ಇವೆ. ಐಫೋನ್ 16 ಸರಣಿಯ ಫೋನ್ಗಳು, ಎಂ4 ಚಿಪ್ ಆಧಾರಿತ ಮ್ಯಾಕ್ಬುಕ್ ಪ್ರೊ (ಪರ್ಸನಲ್ ಕಂಪ್ಯೂಟರ್ಗಳು), ಆ್ಯಪಲ್ ಪೆನ್ಸಿಲ್ ಪ್ರೊ ಇರುವ ಐಪ್ಯಾಡ್ ಏರ್ (ಟ್ಯಾಬ್ಲೆಟ್) ಹಾಗೂ 10ನೇ ಸರಣಿಯ ಆ್ಯಪಲ್ ವಾಚ್, ಜೊತೆಗೆ ಏರ್ಪಾಡ್ಗಳು (ಇಯರ್ಫೋನ್ಸ್), ಏರ್ಟ್ಯಾಗ್ಗಳು ನೇರವಾಗಿ ಆ್ಯಪಲ್ ಕಂಪನಿಯ ಮೂಲಕವೇ ದೊರೆಯಲಿವೆ.

ಇಲ್ಲಿ ಬೇಕಾದ ಉತ್ಪನ್ನವನ್ನು ಆಯ್ಕೆ ಮಾಡುವಲ್ಲಿ ಆ್ಯಪಲ್ ವಿಶೇಷಜ್ಞರು ಗ್ರಾಹಕರಿಗೆ ಪೂರ್ಣ ರೀತಿಯ ವಿವರ ನೀಡಿ ಖರೀದಿಗೆ ನೆರವಾಗಲಿದ್ದಾರೆ. ಸಾಧನಗಳನ್ನು ಅಲ್ಲೇ ಬಳಸಿ ನೋಡಿ, ಖರೀದಿಯ ನಿರ್ಧಾರ ಕೈಗೊಳ್ಳಬಹುದಾಗಿದೆ. ಅದೇ ರೀತಿ, ಆನ್ಲೈನ್ನಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದ ಆ್ಯಪಲ್ ಉತ್ಪನ್ನಗಳನ್ನು ಇಲ್ಲಿಂದ ಪಡೆದುಕೊಳ್ಳಬಹುದಾಗಿದೆ.

ದೇಶದ 15 ರಾಜ್ಯಗಳ ಸುಮಾರು 70 ಸಿಬ್ಬಂದಿ ಇಲ್ಲಿ ಗ್ರಾಹಕರ ಸಹಾಯಕ್ಕಿದ್ದಾರೆ. ಐಒಎಸ್ಗೆ ಬದಲಾಗುವಲ್ಲಿ ಎದುರಾಗುವ ತೊಡಕುಗಳಿಗೂ ಪರಿಹಾರ ನೀಡಲಿದ್ದಾರೆ. ಆ್ಯಪಲ್ ಉತ್ಪನ್ನಗಳ ಬಳಕೆಯ ಕುರಿತು ಗ್ರಾಹಕರಿಗೆ ತಿಳಿಯಪಡಿಸುವ ಉದ್ದೇಶದಿಂದ ಪ್ರತಿದಿನವೂ ವಿಶೇಷ ಸೆಶನ್ಗಳು ಇಲ್ಲಿ ಉಚಿತವಾಗಿ ಜರುಗಲಿವೆ. ಸಾಧನಗಳ ಬಗ್ಗೆ ತಿಳಿದುಕೊಳ್ಳುವುದಷ್ಟೇ ಅಲ್ಲದೆ, ಐಫೋನ್ನಲ್ಲಿ ಉತ್ತಮ ಫೋಟೊ ಸೆರೆಹಿಡಿಯುವುದು ಹೇಗೆ, ಆ್ಯಪಲ್ ಇಂಟೆಲಿಜೆನ್ಸ್ ಬಳಕೆ ಹೇಗೆ, ಐಪ್ಯಾಡ್ನಲ್ಲಿ ಆ್ಯಪಲ್ ಪೆನ್ಸಿಲ್ ಬಳಸಿ ಕಲಾಕೌಶಲ್ಯ ಅಭಿವ್ಯಕ್ತಿಸುವುದು ಹೇಗೆ ಮುಂತಾದ ಮಾಹಿತಿಗಳನ್ನು ಅರಿಯಬಹುದಾಗಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾವಹಾರಿಕ ಸಂಸ್ಥೆಗಳಿಗೂ ಅವರಿಗೆ ಬೇಕಾದ ರೀತಿಯಲ್ಲಿ ಆ್ಯಪಲ್ ಉತ್ಪನ್ನಗಳ ಬಳಕೆಯ ಬಗ್ಗೆ ತಜ್ಞರು ಇಲ್ಲಿ ಮಾಹಿತಿ ನೀಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.