ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Apple Watch: ಹೊಸ ಸರಣಿಯ ವಾಚ್ ಬೆಲೆ, ಬಿಡುಗಡೆ ದಿನಾಂಕ ಪ್ರಕಟ

Last Updated 5 ಅಕ್ಟೋಬರ್ 2021, 7:23 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಪಲ್ ಹೊಸದಾಗಿ ಪರಿಚಯಿಸಿದ್ದ ಸ್ಮಾರ್ಟ್‌ವಾಚ್ ಸಿರೀಸ್ 7 ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆ ಮತ್ತು ಬೆಲೆ ವಿವರವನ್ನು ಕಂಪನಿ ಬಹಿರಂಗಪಡಿಸಿದೆ.

ಅಕ್ಟೋಬರ್ 8ರ ಮಧ್ಯಾಹ್ನ 1ರಿಂದ ಪ್ರಿ ಬುಕಿಂಗ್ ಲಭ್ಯವಾಗುತ್ತಿದೆ. ಆ್ಯಪಲ್ ವಾಚ್ ಸಿರೀಸ್ 7, ಮಾರುಕಟ್ಟೆಯಲ್ಲಿ ಅ. 15ರಿಂದ ದೊರೆಯುವ ಬಗ್ಗೆ ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ.

ಸೆಪ್ಟೆಂಬರ್‌ನಲ್ಲಿ ನಡೆದ ಆ್ಯಪಲ್ ಈವೆಂಟ್‌ನಲ್ಲಿ ಹೊಸ ಐಫೋನ್ 13 ಸರಣಿ ಮತ್ತು ವಾಚ್ ಸಿರೀಸ್ 7 ಅನ್ನು ಪರಿಚಯಿಸಲಾಗಿತ್ತು. ಆದರೆ ನೂತನ ವಾಚ್ ಮಾರುಕಟ್ಟೆಗೆ ಪ್ರವೇಶಿಸಿರಲಿಲ್ಲ.

ಬೆಲೆ ವಿವರ

ಆ್ಯಪಲ್ ವಾಚ್ ಸಿರೀಸ್ 7 ಮಾದರಿ ಆರಂಭಿಕ ಆವೃತ್ತಿ ಬೆಲೆ ₹41,900 ಇದೆ. ಅಂತಿಮ ಆವೃತ್ತಿ ದರ ₹73,900 ದರವಿದೆ.

ಐದು ನೂತನ ಬಣ್ಣಗಳಲ್ಲಿ ಆ್ಯಪಲ್ ಹೊಸ ವಾಚ್ ಸಿರೀಸ್ 7 ಅನ್ನು ಪರಿಚಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT