ಮಂಗಳವಾರ, ಜುಲೈ 5, 2022
21 °C

ನೂತನ 4K LED ಹೋಮ್ ಪ್ರೊಜೆಕ್ಟರ್ ಪರಿಚಯಿಸಿದ ಬೆಂಕ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ಯಾಜೆಟ್ ಮಾರುಕಟ್ಟೆಗೆ ಬೆಂಕ್, ಹೊಸ ವಿನ್ಯಾಸದ 4K LED ಹೋಮ್ ಪ್ರೊಜೆಕ್ಟರ್ ಬಿಡುಗಡೆ ಮಾಡಿದೆ.

ಮನೆಯಲ್ಲಿಯೇ, ದೊಡ್ಡ ಪರದೆಯಲ್ಲಿ ಸಿನಿಮಾ, ಕ್ರೀಡೆ ಮತ್ತು ಗೇಮಿಂಗ್ ಅನ್ನು ಇಷ್ಟಪಡುವವರಿಗಾಗಿ ಬೆಂಕ್ ನೂತನ ಪ್ರೊಜೆಕ್ಟರ್ ಪರಿಚಯಿಸಿದೆ.

ಹೊಸ ಬೆಂಕ್ X3000i 4K LED ಹೋಮ್ ಪ್ರೊಜೆಕ್ಟರ್, ಆ್ಯಂಡ್ರಾಯ್ಡ್ ಟಿವಿ ಫೀಚರ್ ಹೊಂದಿದ್ದು, ಅದರ ಮೂಲಕ 5000ಕ್ಕೂ ಅಧಿಕ ವಿವಿಧ ಆ್ಯಪ್‌ಗಳನ್ನು ಬಳಸಬಹುದು. ಜತೆಗೆ ಮಿರರ್ ಕಾಸ್ಟಿಂಗ್ ಹಾಗೂ ವಾಯ್ಸ್ ಅಸಿಸ್ಟ್ ಬೆಂಬಲ ಹೊಂದಿದೆ ಎಂದು ಕಂಪನಿ ಹೇಳಿದೆ.

ಬೆಂಕ್ ಹೋಮ್ ಪ್ರೊಜೆಕ್ಟರ್‌ನಲ್ಲಿ 10W ಸ್ಪೀಕರ್‌ ಇದ್ದು, 2 ವರ್ಷಗಳ ವಾರಂಟಿ ಜತೆಗೆ 20,000 ಗಂಟೆ ಇಲ್ಲವೆ 2 ವರ್ಷಗಳ ಲೈಟ್ ಸೋರ್ಸ್ ವಾರಂಟಿ ಬೆಂಬಲ ಹೊಂದಿದೆ.

4K LED ಹೋಮ್ ಪ್ರೊಜೆಕ್ಟರ್‌ ಮೂಲಕ ಗುಣಮಟ್ಟದ ಚಿತ್ರ, ದೃಶ್ಯಗಳನ್ನು ದೊಡ್ಡ ಪರದೆಯಲ್ಲಿ ಪಡೆಯಬಹುದು ಎಂದು ಬೆಂಕ್ ತಿಳಿಸಿದೆ.

ಬೆಲೆ ಮತ್ತು ಲಭ್ಯತೆ
ಹೊಸ ಬೆಂಕ್ X3000i 4K LED ಹೋಮ್ ಪ್ರೊಜೆಕ್ಟರ್ ಎಲ್ಲ ಪ್ರಮುಖ ಡೀಲರ್‌ಗಳಲ್ಲಿ ದೊರೆಯಲಿದ್ದು, ₹4 ಲಕ್ಷ ದರ ಹೊಂದಿದೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು